ಬೆಂಗಳೂರು: ಕಾಂಗ್ರೆಸ್‍ಗೆ ಸ್ಥಳೀಯ ಸಂಸ್ಥೆ ಚುನಾವಣೆ ಜೊತೆಗೆ ಕೆಲವು ಬೈ ಎಲೆಕ್ಷನ್ ನಡೆದಿದೆ. ನನಗೆ ಸಮಾಧಾನಕರ ಫಲಿತಾಂಶ ಕಾಣುತ್ತಿದೆ. ಕಲಬುರಗಿ ಗೆದ್ದಿದ್ದೇವೆ. ಹುಬ್ಬಳಿ-ಧಾರವಾಡ ಇಂಪ್ರೂವ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಮ್ಮ ಕ್ಯಾಂಡಿಡೇಟ್ ಇರ್ತಿರಲಿಲ್ಲ. ಅಲ್ಲಿ ಹಾಕುವುದು ಬೇಡ ಅಂತ ನಮ್ಮಲ್ಲೆ ಒತ್ತಡ ಇತ್ತು. ಈ ಬಾರಿ ಹಾಕಿದ್ದೇವೆ ಬೆಸ್ಟ್ ಇಂಪ್ರೂವ್ ಆಗಿದೆ. ಮುಂದೆ ಜಾಗೃತರಾಗಿ ಮುಂಜಾಗೃತೆಯಿಂದ ಕೆಲಸ ನಿರ್ವಹಿಸುತ್ತೇವೆ. ಲೋಕಲ್ ಬಾಡಿ ಎಲೆಕ್ಷನ್ ಲೋಕಲ್ ಕ್ಯಾಂಡಿಡೇಟ್ ಮೇಲೆ ಡಿಪೆಂಡ್ ಆಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಪಂಜಶೀರ್ ವಶಪಡಿಸಿಕೊಂಡ ತಾಲಿಬಾನ್
Advertisement
Advertisement
ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮವರೇ 7-8 ಜನ ರೆಬೆಲ್ ಆಗಿದ್ದಾರೆ. ಅದರಲ್ಲಿ 3-4 ಜನ ಗೆದ್ದಿದ್ದಾರೆ ಏನು ಮಾಡೋದು. ಸೋಲನ್ನ ನಾವು ಒಪ್ಪಿಕೊಳ್ತೇವೆ. ರಿಸೆಲ್ಟ್ ಗಾಬರಿ ಆಗುವಂತಿಲ್ಲ ಸಮಾಧಾನ ತಂದಿದೆ. ಕೋವಿಡ್ ನಿಯಮದಲ್ಲಿ ನಮಗೆ ಪ್ರಚಾರಕ್ಕೆ ಅವಕಾಶ ಇರಲಿಲ್ಲ. ಅವರು ಬಿಜೆಪಿಯವರು ಅಧಿಕಾರ ಮಿಸ್ ಯೂಸ್ ಮಾಡಿಕೊಂಡು ಪ್ರಚಾರ ಮಾಡಿದರು. ತರಿಕೆರೆ ಅವರದ್ದೇ ಎಂಎಲ್‍ಎ ಇತ್ತು ನಾವೇ ಗೆದಿದ್ದೇವೆ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲಾ ಎಂದಿದ್ದಾರೆ.
Advertisement
Advertisement