ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಬೆಳಗಾವಿ ರಾಜಕೀಯದಲ್ಲಿ (Politics) ಮಾತ್ರವಲ್ಲ, ರಾಜ್ಯ ರಾಜಕೀಯ ಮತ್ತು ರಾಷ್ಟ್ರ ರಾಜಕೀಯವನ್ನೂ ಮಾಡುತ್ತಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ (Ashok Pattan) ತಿಳಿಸಿದ್ದಾರೆ.
ಬೆಳಗಾವಿ (Belagavi) ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷರಾದ ಅವರು ಇಡೀ ರಾಜ್ಯಕ್ಕೆ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರು ಬೆಳಗಾವಿ ಪಾಲಿಟಿಕ್ಸ್ ಮಾತ್ರ ಮಾಡುವುದಿಲ್ಲ. ಇಡೀ ರಾಜ್ಯದ ಪಾಲಿಟಿಕ್ಸ್ ಮಾಡುತ್ತಾರೆ. ಬೆಳಗಾವಿಗೆ ಮಾತ್ರ ಅವರು ಸೀಮಿತವಲ್ಲ, ರಾಷ್ಟ್ರ ಮಟ್ಟದ ರಾಜಕೀಯವನ್ನೂ ಅವರು ಮಾಡುತ್ತಾರೆ. ಬೆಳಗಾವಿಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಯಾಕೆ ಅವರು ಹಸ್ತಕ್ಷೇಪ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ
- Advertisement3
ಡಿಕೆಶಿ ಬೆಳಗಾವಿಗೆ ತೆರಳಿದ್ದ ವೇಳೆ ಶಾಸಕರು ಆಗಮಿಸಿದ ವಿಚಾರಕ್ಕೆ, ಸತೀಶ್ ಜಾರಕಿಹೊಳಿ ಮೈಸೂರಿನಲ್ಲಿ ಇದ್ದರು. ನಾನು ವೈಯಕ್ತಿಕ ಕಾರಣಕ್ಕೆ ಬೆಂಗಳೂರಿನಲ್ಲಿ ಇದ್ದೆ. ಹೀಗಾಗಿ ಹೋಗಲು ಆಗಿಲ್ಲ. ಸಭೆ ಕರೆದಿದ್ದರೆ ನಾವು ಹೋಗುತ್ತಿದ್ದೆವು. ಅವರು ಬರುವುದು ಗೊತ್ತಿತ್ತು, ಸಭೆ ಇಲ್ಲದ ಕಾರಣ ನಾವು ಹೋಗಿಲ್ಲ. ಸಿಎಂ, ಅಧ್ಯಕ್ಷರು ಹಾಗೂ ಸಚಿವರು ಬಂದರೆ ನಾವು ಹೋಗೇ ಹೋಗ್ತೀವಿ. ಊರಲ್ಲಿ ಇಲ್ಲದ ಕಾರಣ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
- Advertisement
ಸತೀಶ್ ಜಾರಕಿಹೊಳಿ ಟೀಂನಿಂದ ಪ್ರವಾಸ ವಿಚಾರಕ್ಕೆ, ನಾನು ಬೆಳಗಾವಿ ಜಿಲ್ಲೆಯವನು, ಅವರು ಯಾವಾಗಲೂ ಮೈಸೂರಿಗೆ ನನ್ನನ್ನು ಕರೆದಿಲ್ಲ. ನನ್ನ ಪಾಡಿಗೆ ನಾನು ಒಂದು ದಿನ ಅವರ ಮನೆಗೆ ಹೋಗಿದ್ದೆ. ಕಾಕತಾಳಿಯ ಎಂಬಂತೆ 4-5 ಶಾಸಕರು ಬಂದರು. ನಾನು ಅಭಿವೃದ್ಧಿ ವಿಚಾರವಾಗಿ ಮಾತನಾಡಿಕೊಂಡು ಬಂದೆ. ಅಲ್ಲಿ ಮೈಸೂರಿಗೆ ಹೋಗುವ ವಿಷಯವಾಗಿ ಯಾವ ಮೀಟಿಂಗ್ ಕೂಡಾ ಆಗಿಲ್ಲ. ಮೀಟಿಂಗ್ ಇದ್ದರೆ ನಾನೇ ಹೇಳುತ್ತೇನೆ. ಆಗ ಶಾಸಕರು ಸೇರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್
Web Stories