– ಡೀಲ್ ಆರೋಪದ ಬೆನ್ನಲ್ಲೇ ಡಿಕೆಶಿ ಗುಣಗಾಣ
– ಪರ್ಸಂಟೇಜ್ ರಾಜಕಾರಣಕ್ಕೆ ಹೋದವರಲ್ಲ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ನಾನು ಕಳೆದ 4 ದಶಕಗಳಿಂದ ತಿಳಿದಿದ್ದೇನೆ. ಅವರೊಬ್ಬ ಒಳ್ಳೆಯ ಆಡಳಿತಗಾರ ಹಾಗೂ ಜನಪರ ಕಾಳಜಿ ಉಳ್ಳವರು ಎಂದು ಸಂಸದ ಉಗ್ರಪ್ಪ ಹಾಡಿಹೊಗಳಿದ್ದಾರೆ.
Advertisement
ಡೀಲ್ ಆರೋಪದ ಸುದ್ದಿ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕರು ಬಿಂಬಿಸಿದಂತೆ ಕಾಂಗ್ರೆಸ್ಸಿನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಒಂದೇ ಅನ್ನೋದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಡಿಕೆಶಿಯವರು, ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಇನ್ನಿತರ ಎಲ್ಲಾ ನಾಯಕರು ಒಮ್ಮತದಿಂದ ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವು ಮಾಧ್ಯಮಗಳು ಗುಂಪುಗಾರಿಕೆ ಇದೆ ಹೇಳುತ್ತಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸಂಸದರು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ
Advertisement
Advertisement
ನಿನ್ನೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ನಾನು ಹೊರಗಡೆ ಬಂದು ಕುಳಿತ ತಕ್ಷಣ ಸಲೀಂ ಅವರು ನನ್ನ ಕಿವಿಯಲ್ಲಿ ಗುಣುಗುಟ್ಟಿದರು. ಪ್ರೆಸ್ ಮೀಟ್ ಗೂ ಮುನ್ನ ನಮ್ಮ ಪಕ್ಷ ಅಧ್ಯಕ್ಷರ ಬಗ್ಗೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿದರು. ಆದರೆ ಮಾಧ್ಯಮದಲ್ಲಿ ಮಾತ್ರ ಸಲೀಂ ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಾಧ್ಯಮಗಳಿದಲೇ ಅಪಾರ್ಥ ಆಗಿದೆ ಎಂದು ಹೇಳುವ ಮೂಲಕ ಉಗ್ರಪ್ಪ ಮಾತು ಮರೆಮಾಚಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು
Advertisement
ಡಿಕೆಶಿಯವರು ಇಂದು ಆಸ್ತಿಯನ್ನು ಗಳಿಸಿದ್ದರೆ ಅದು ರಾಜಕಾರಣದಿಂದಲ್ಲ. ವ್ಯಾಪಾರ ಹಾಗೂ ಇನ್ನಿತರ ವ್ಯವಹಾರಗಳಿಂದ ಆಸ್ತಿ ಮಾಡಿದ್ದಾರೆ. ಅವರ ಜೀವನದಲ್ಲಿ ಎಂದಿಗೂ ಪರ್ಸೆಂಟೇಜ್ ರಾಜಕಾರಣಕ್ಕೆ ಹೋದವರಲ್ಲ. ಒಟ್ಟಿನಲ್ಲಿ ಪಕ್ಷದ ಅಧ್ಯಕ್ಷರೇ ಕೋಟಿಗಟ್ಟಲೇ ಡೀಲ್ ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಯಲು ಮಾಡಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ
ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷರು. ಅವರನ್ನು ನಾಲ್ಕು ದಶಕಗಳಿಂದ ಬಲ್ಲೆ. ಅವರು ಅತ್ಯಂತ ಕ್ರಿಯಾಶೀಲ, ಜನಪರ, ಬದ್ಧತೆ ಇರುವ ರಾಜಕಾರಣಿ. ರೈತ ಕುಟುಂಬದಿಂದ ಹುಟ್ಟಿ, ಇಂದು ರಾಜ್ಯ ಹಿರಿಯ ನಾಯಕರಲ್ಲಿ ಅವರೊಬ್ಬರು ಹಿರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಡಿಕೆಶಿ ಗುಣಗಾನ ಮಾಡಿದ ಅವರು, ಒಂದೆಡೆ ರಾಜಕಾರಣದಲ್ಲಿ ಅತ್ಯಂತ ಒಳ್ಳೆಯ ಆಡಳಿತಗಾರ, ರಾಜ್ಯದ ಅಭಿವೃದ್ಧಿ ಹಾಗೂ ಜನಪರ ರಾಜಕಾರಣಿ ಎಂದು ಹೇಳುವ ಮೂಲಕ ಪಾವಗಡದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯದ ಕುರಿತು ಮಾತನಾಡಿದರು. ಇದೇ ವೇಳೆ ಭ್ರಷ್ಟಾಚಾರ ಮುಕ್ತವಾಗಲು ಕಾಂಗ್ರೆಸ್ ಬದ್ಧವಾಗಿದೆ ಎಂದರು. ಇದನ್ನೂ ಓದಿ: ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ