ನಾನು ರೇಪ್ ಮಾಡಿಲ್ಲ, ದುಡ್ಡೂ ಕದ್ದಿಲ್ಲ: ಡಿಕೆಶಿ

Public TV
1 Min Read
D K Shivakumar

ಬೆಂಗಳೂರು: ಗುರುವಾರ ರಾತ್ರಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸುಮ್ಮನೆ ನೀವು ಟೆನ್ಶನ್ ಮಾಡಿಕೊಳ್ಳಬೇಡಿ, ನಾನು ಕೂಡ ಟೆನ್ಶನ್ ಮಾಡಿಕೊಂಡಿಲ್ಲ. ನಾನೇನೂ ತಪ್ಪು ಮಾಡಿಲ್ಲ, ರೇಪ್ ಕೂಡ ಮಾಡಿಲ್ಲ, ದುಡ್ಡೂ ಕದ್ದಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ನಾನೇನೂ ತಪ್ಪು ಮಾಡಿಲ್ಲ, ರೇಪು ಮಾಡಿಲ್ಲ, ದುಡ್ಡು ಕದ್ದಿಲ್ಲ. ರಾಜಕೀಯವಾಗಿ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಲು ಅವರನ್ನು ಹಿಡಿದಿಟ್ಟಿದ್ವಿ. ಹೀಗಾಗಿ ಅದಕ್ಕಾಗಿ ಈಗ ಬೇಕಾದಷ್ಟು ಅನುಭವಿಸುತ್ತಿದ್ದೇವೆ. ಪರವಾಗಿಲ್ಲ ಎಲ್ಲವನ್ನೂ ನಾವು ಫೇಸ್ ಮಾಡಬೇಕು ಎಂದರು.

vlcsnap 2019 08 30 09h11m29s196

ಏನಾದರೂ, ಯಾರಿಗಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ. ಗುರುವಾರ ನಾವು ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಸದ್ಯಕ್ಕೆ ನಾನು ಪ್ಲೈಟ್ ಬುಕ್ ಮಾಡಿದ್ದು, ದೆಹಲಿಗೆ ಹೋಗುತ್ತಿದ್ದೇನೆ. ಲಾಯರ್ ನಾ ಮೀಟ್ ಮಾಡಬೇಕು ಎಂದರು.

ಗುರುವಾರ ರಾತ್ರಿ 9.40ಕ್ಕೆ ನನಗೆ ಸಮನ್ಸ್ ಕೊಟ್ಟು ಒಂದು ಗಂಟೆಗೆ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಅದಕ್ಕೂ ಮೊದಲು ಪ್ರೆಸ್ ಮೀಟ್ ಮಾಡಿ ಮಾತಾಡೇ ದೆಹಲಿಗೆ ಹೋಗುತ್ತೇನೆ. ನನಗೆ ಒಂದೆರಡು ಗಂಟೆ ಪರ್ಸನಲ್ ಕಮಿಟ್ ಮೆಂಟ್ ಕೆಲಸ ಇದೆ. ಆದ್ದರಿಂದ ಹೋಗುತ್ತಿದ್ದೇನೆ. ನನ್ನ ಯಾರೂ ಫಾಲೋ ಮಾಡಬೇಡಿ ಎಂದು ಡಿಕೆಶಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *