– ಬಿಜೆಪಿಗೆ ಟೀಕೆಗೆ ಡಿಸಿಎಂ ತಿರುಗೇಟು
ಬೆಂಗಳೂರು: ದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ (Narendra Modi) ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ಬಿಹಾರಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಸರಿಯಾದ ರಸ್ತೆ ಮಾಡಿದರೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್ ಬಾಲಕ!
ನಮ್ಮ ಜಿಬಿಎ ಅಧಿಕಾರಿಗಳು ಪ್ರತಿನಿತ್ಯ 1,000 ಗುಂಡಿಗಳನ್ನ ಮುಚ್ಚುತ್ತಿದ್ದಾರೆ. ಅವ್ರು ನಾವು ಅದಷ್ಟು ಬೇಗ ಗುಂಡಿಗಳಿಂದ (Potholes) ಮುಕ್ತ ಬೆಂಗಳೂರು ಮಾಡುತ್ತೇವೆ ಅಂತಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ನಾವು ಗುಂಡಿಗಳನ್ನ ಮುಚ್ಚಿಸೋ ಕೆಲಸ ಮಾಡ್ತಾನೆ ಇದ್ದೇವೆ. ಬರೀ ಬೆಂಗಳೂರಿನಲ್ಲಿ ಮಾತ್ರ ಗುಂಡಿಗಳು ಇರೋ ರೀತಿ ಬಿಂಬಿಸಲಾಗ್ತಿದೆ ಎಂದು ದೂರಿದ್ದಾರೆ.

