ಮಂಡ್ಯ: ಇಷ್ಟು ದಿನಗಳ ಕಾಲ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಕನಕಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ಮಾತ್ರ ಎನ್ನಲಾಗುತ್ತಿತ್ತು ಆದ್ರೆ ಇದೀಗ ಡಿಕೆ ಮಂಡ್ಯದ (Mandya) ಮದ್ದೂರು (Maddur) ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಓಡಾಡುತ್ತಿವೆ. ಈ ಲೆಕ್ಕಾಚಾರದಲ್ಲಿ ಡಿಕೆಶಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಹಾಕಿಕೊಂಡಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಗುತ್ತಿದೆ.
Advertisement
ಸದ್ಯ ಕನಕಪುರ ಡಿ.ಕೆ.ಶಿವಕುಮಾರ್ ಗೆಲುವು ಪಡೆಯಲು ಅತ್ಯಂತ ಸುಲಭ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ತಮ್ಮ ಡಿ.ಕೆ.ಸುರೇಶ್, ಅಥವಾ ಕುಟುಂಬದ ಬೇರೊಬ್ಬ ಸದಸ್ಯನನ್ನು ಸ್ಪರ್ಧೆ ಮಾಡಿಸಿ ಕುಟುಂಬಸ್ಥರಿಗೆ ರಾಜ್ಯ ರಾಜಕಾರಣದ ಭವಿಷ್ಯ ಕಲ್ಪಿಸಿಕೊಡುವುದು ಒಂದು ತಂತ್ರವಾಗಿದೆ. ಇದನ್ನೂ ಓದಿ: ರಂಗೇರಿದ ಚುನಾವಣಾ ಅಖಾಡ- ಡಿಕೆಶಿ ಭೇಟಿ ಬೆನ್ನಲ್ಲೇ ಶಿವರಾಮೇಗೌಡ ಶಕ್ತಿ ಪ್ರದರ್ಶನ
Advertisement
Advertisement
ಇನ್ನೂ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಿ ಡಿಕೆ ವಿರುದ್ಧ ತಿರುಗಿ ಬಿದ್ದಿರುವ ಸಂಸದೆ ಸುಮಲತಾ ಅಂಬರೀಶ್ಗೆ (Sumalatha Ambareesh) ಟಕ್ಕರ್ ನೀಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಡಿಕೆಶಿ, ಸುಮಲತಾ ಅಂಬರೀಶ್ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎಂದು ಹೇಳಿದ್ರು. ಇದಕ್ಕೆ ಪ್ರತಿಯಾಗಿ ಸುಮಲತಾ ಅವರು ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೀಗ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ, ಅದು ಸಹ ಮದ್ದೂರು ಅಥವಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಡಿಕೆಶಿ ಅವರೇ ಸ್ವತಃ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಸುಮಲತಾ ಅಂಬರೀಶ್ ಅವರ ರಾಜ್ಯ ರಾಜಕೀಯದ ಓಟಕ್ಕೆ ಬ್ರೇಕ್ ಹಾಕಲು ಹೊರಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?
Advertisement
ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರ ಬಿಟ್ಟು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ, ಮಂಡ್ಯ ಕ್ಷೇತ್ರದಿಂದ ಚೆಲುವನಾರಾಯಣಸ್ವಾಮಿ ಅವರನ್ನು ನಿಲ್ಲಿಸಿ ನಾಗಮಂಗಲ ಕ್ಷೇತ್ರದಿಂದ ಎಲ್.ಆರ್.ಶಿವರಾಮೇಗೌಡ ಅವರನ್ನು ನಿಲ್ಲಿಸುವ ಲೆಕ್ಕಾಚಾರವಿದೆ. ಈ ಲೆಕ್ಕಾಚಾರದ ಮುಖಾಂತರ ಡಿಕೆಶಿ ಮದ್ದೂರು ಹಾಗೂ ಮಂಡ್ಯ ವಿಧಾನಸಭಾ ಕ್ಷೇಗಳಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಚಕ್ರವ್ಯೂಹ ಹೆಣೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k