ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಕ್ಷದ ಶಿಸ್ತಿನ ಬಗ್ಗೆ ತಿಳಿ ಹೇಳಿದ ಬಳಿಕ ವಿವಾದಾತ್ಮಕ ಹೇಳಿಕೆ ನೀಡಿ ಸಮಜಾಯಿಷಿ ನೀಡುತ್ತಿದ್ದ ಶಾಸಕ ಜಮೀರ್ ಅಹಮದ್ ಖಾನ್ ಸೈಲೆಂಟ್ ಆಗಿದ್ದಾರೆ.
Advertisement
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್‍ರನ್ನು ತರಾಟೆಗೆ ತೆಗೆದುಕೊಂಡರು, ಎಲ್ಲಾ ಗೊತ್ತಿದೆ. ಪಕ್ಷದ ಅಧ್ಯಕ್ಷನಾಗಿ ಮೊದಲೇ ಹೇಳಿದ್ದೆ ಹಿಜಬ್ ಬಗ್ಗೆ ಯಾರು ಮಾತನಾಡಬಾರದು ಅಂತ ಆದರೂ ನೀವು ಮಾತನಾಡಿದ್ದೀರ ಸ್ಪಷ್ಟನೆ ಪಡೆಯುತ್ತೇನೆ ಅವರು ಕ್ಷಮೆ ಕೇಳಬೇಕು ಅಂದರೆ, ನಾನು ಯಾರ ಕ್ಷಮೆ ಕೇಳಲ್ಲ ಅಂತ ಬಾಯಿಗೆ ಬಂದಂತೆ ಮಾತಾಡ್ತೀರ ಎಂದು ಜಮೀರ್ ವಿರುದ್ಧ ಡಿಕೆಶಿ ಹರಿಹಾಯ್ದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್
Advertisement
Advertisement
ಪಕ್ಷ ಮೊದಲು ಆಮೇಲೆ ವ್ಯಕ್ತಿ. ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಪಕ್ಷದ ಸೂಚನೆ ಮೀರಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಡಿಕೆಶಿ ಗದರಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಾ ಮುಗಿದಿದೆ ಜಮೀರ್ ಕ್ಷಮೆನೂ ಕೇಳಿದ್ದಾರೆ ಎಂದು ಸಮಾಧಾನ ಪಡಿಸಲು ಮುಂದಾದರು. ಇದನ್ನೂ ಓದಿ: ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್
Advertisement
ಇತ್ತ ಜಮೀರ್ ನಾನು ಹಾಗೆ ಹೇಳಿದಲ್ಲ ಎಂದು ಸಮಜಾಯಿಷಿ ಕೊಡಲು ಮುಂದಾದರು. ನಂತರ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದ ಶಿಸ್ತಿನ ಬಗ್ಗೆ ಅನಗತ್ಯ ಮಾತನಾಡದಂತೆ ಜಮೀರ್‌ಗೆ ಬುದ್ಧಿ ಮಾತು ಹೇಳಿದರು. ಬಳಿಕ ಇನ್ನೂ ಪಕ್ಷದ ಶಿಸ್ತನ್ನು ಮೀರಿ ಮಾತನಾಡುವುದಿಲ್ಲ ಎಂದು ಜಮೀರ್ ಸೈಲೆಂಟ್ ಆದರು.