- 20 ನಿಮಿಷದಲ್ಲಿ ಗಣತಿ ಆಗುತ್ತೆ ಎಂದ ಸಿಬ್ಬಂದಿಗೆ ಇಲ್ಲೇಕೆ 1 ಗಂಟೆ ತಗೊಂಡ್ರಿ ಎಂದ ಡಿಸಿಎಂ!
ಬೆಂಗಳೂರು: ನಗರದಲ್ಲಿ (Bengaluru) ಇಂದಿನಿಂದ (ಅ.4) ಜಾತಿಗಣತಿ ಸಮೀಕ್ಷೆ ಆರಂಭವಾಗಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರ ಸದಾಶಿವನಗರ ನಿವಾಸದಲ್ಲೂ ಸಮೀಕ್ಷೆ (Caste Census Survey) ನಡೆಯಿತು. ಈ ವೇಳೆ ಗಣತಿದಾರರ ಬಳಿ ಪ್ರಶ್ನೆಗಳ ವಿಚಾರಕ್ಕೆ ಡಿಸಿಎಂ ಅಸಮಾಧಾನ ಹೊರಹಾಕಿದ್ದಾರೆ.
ಡಿಸಿಎಂ ಪತ್ನಿ ಉಷಾ ಜೊತೆ ಕುಳಿತು ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ನೀಡಿದರು. ಈ ವೇಳೆ, ಗಣತಿಯ ಓಟಿಪಿ ಯಾವ ಮೊಬೈಲ್‌ಗೆ ಬಂದಿದೆ ಎಂದು ಹುಡುಕಾಟ ನಡೆಸಿದರು. ಕೊನೆಗೆ ಓಟಿಪಿ ಬಂದಿರುವ ಮೊಬೈಲನ್ನು ಸಿಬ್ಬಂದಿಯೇ ಹುಡುಕಿ ತಂದುಕೊಟ್ಟರು. ಬಳಿಕ ಓಟಿಪಿ ಹೇಳಿ ಗಣತಿಗೆ ಎಲ್ಲಾ ಮಾಹಿತಿ ನೀಡಿದರು. ಇದನ್ನೂ ಓದಿ: ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ – ಗೊಂದಲ, ಘರ್ಷಣೆ ತಪ್ಪಿಸಿ: ಅಶ್ವತ್ಥ ನಾರಾಯಣ್
ಗಣತಿಯಲ್ಲಿ ಮಾಹಿತಿ ಸಂಗ್ರಹದ ದಾಖಲೆ ನೋಡಿ ಇಷ್ಟೊಂದು ಪ್ರೆಶ್ನೆಗಳು ಇದಾವಾ? ನಾನು ಫಾರಂ ನೋಡಿರಲಿಲ್ಲ, ಜನರಿಗೆ ಉತ್ತರಿಸಲು ಅಷ್ಟೆಲ್ಲ ತಾಳ್ಮೆ ಇರಲ್ಲ. ಪ್ರೆಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ ಎಂದು ಅಸಮಧಾನ ವ್ಯಕ್ತಪಡಿಸಿದರು. ಪ್ರಶ್ನೆ ಸಿಂಪಲ್ ಮಾಡ್ರಿ ಇದಕ್ಕೆಲ್ಲ ಯಾರು ಉತ್ತರ ಕೊಡ್ತಾರೆ. ಕೋಳಿ, ದನ, ಕುರಿ, ಮೇಕೆ, ಜೇನು ಸಾಕಿದ್ಯಾ? ವಿಮೆ ಮಾಡಿದ್ಯಾ? ಎಲ್ಲಾ ಜನ ಉತ್ತರ ಕೊಡ್ತಾರಾ ನಡಿ ಅಂತಾರೆ ಎಂದು ಅಧಿಕಾರಿಗಳ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. 22 ನಿಮಿಷದಲ್ಲಿ ಸರ್ವೆ ಆಗುತ್ತೆ ಅಂದ ಅಧಿಕಾರಿಗಳಿಗೆ ಮತ್ತೆ ನನ್ನ ಮನೆಯಲ್ಲೆ 1 ಗಂಟೆ ತಗೊಂಡ್ರಿ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೋಳಿ ಸಾಕಿದಿರಾ? ಮೀನು ಸಾಕಿದಿರಾ? ಬಂಗಾರ ಎಷ್ಟಿದೆ ಎಲ್ಲಾ ಕೇಳದಂತೆ ಸೂಚಿಸಿರು.
ಡಿಕೆಶಿ ಮನೆಯ ಸಮೀಕ್ಷೆಯಲ್ಲಿ ಏನೆಲ್ಲ ಮಾಹಿತಿ ನೀಡಿದ್ದಾರೆ?
* ಡಿಕೆಶಿ ಬೆಂಗಳೂರು ದಕ್ಷಿಣ ಜಿಲ್ಲೆ, ಕನಕಪುರ ತಾಲೂಕು
* ಗ್ರಾಮ ದೊಡ್ಡ ಹಾಲ ಹಳ್ಳಿ
* ಮನೆ ಸಂಖ್ಯೆ 128 ಇರಬೇಕು
* ನಾನು ಪಬ್ಲಿಕ್ ಸರ್ವೆಂಟ್, ಯಾವುದೇ ಸರ್ಕಾರಿ ಮೀಸಲಾತಿ ಎಜುಕೇಶನ್ ಬೆನಿಫಿಟ್ ಪಡೆದಿಲ್ಲ
* ಸ್ವಂತ ಉದ್ಯಮ ಇಲ್ಲ, ಕೃಷಿ ಕುಲ ಕಸುಬು
* ಆದಾಯದ ಸ್ಲಾಬ್, ದೊಡ್ಡ ಸ್ಲಾಬ್ ಹಾಕಲು ಸೂಚನೆ (12 ಲಕ್ಷಕ್ಕಿಂತ ಮೇಲೆ)
* ಕಂಪ್ಯೂಟರ್ ಜ್ಞಾನ ಇಲ್ಲ
* ರಾಜಕೀಯ ಪ್ರಾತಿನಿಧ್ಯ ಮಂತ್ರಿ
* ಜಿಲ್ಲಾ ಪಾಂಚಾಯತ್ ಮೆಂಬರ್ ಆಗಿದ್ದೆ
* ಕೋ ಅಪರೆಟಿವ್ ಹಾಗೂ ನ್ಯಾಷನಲ್ ಬ್ಯಾಂಕ್ ಎರಡರಲ್ಲೂ ಅಕೌಂಟ್ ಇದೆ
* ಸಹಕಾರಿ ಬ್ಯಾಂಕುಗಳ ಮೆಂಬರ್ ಶಿಪ್ ಇದೆ
* ಹಾಲು ಉತ್ಪಾದಕ ಸಂಘದ ಮೆಂಬರ್ ಶಿಪ್ ನೆನಪಿಲ್ಲ
* ನಿಗಮ ಮಂಡಳಿ ಸದಸ್ಯತ್ವ ಇದೆ
* ಕೈಗಾರಿಕಾ ನೊಂದಾವಣೆ ಇಲ್ಲ
* ಕುಟುಂಬ ಹೊಂದಿರುವ ಒಟ್ಟು ಕೃಷಿ ಜಮೀನು 50-55 ಎಕರೆ..
* ನೀರಾವರಿ ಮೂಲ ಬೋರ್ವೆಲ್
* ಕುಟುಂಬದ ಸಾಲ ಬ್ಯುಸಿನೆಸ್ ಸಾಲ
* ಸಾಲದ ಉದ್ದೇಶ ವ್ಯಾಪಾರ
* ಸಾಲದ ಮೂಲ ಬ್ಯಾಂಕ್
* 25 ಹಸು ನಾಲ್ಕು ಎತ್ತು ಎಮ್ಮೆ ಇಲ್ಲ
* ಕುರಿ 10, ಮೇಕೆ 10, ಹೈನುಗಾರಿಕೆ ಇದೆ, ಕುರಿಸಾಗಾಣಿಕೆ ಇದೆ, ಮೀನುಗಾರಿಕೆ ಇಲ್ಲ
* 3-4 ವಾಣಿಜ್ಯ ಸಂಕೀರ್ಣ ಇದೆ
* 9 ಮನೆ, 2 ಫಾರ್ಮ್ ಹೌಸ್ ಇದೆ
* ಇತರೆ ಕಟ್ಟಡ ಪಟ್ಟಿ ಕೊಡಬೇಕು ಅಷ್ಟೆ ಖಾಲಿ ನಿವೇಶನ ಸಾಕಷ್ಟಿದೆ ಅಂದಾಜು 10
* ಕಂಪ್ಯೂಟರ್ ಲ್ಯಾಪ್ ಟಾಪ್ ಎಸಿ ಇಂಟರ್ನೆಟ್ ಟಿವಿ ಲ್ಯಾಂಡ್ ಲೈನ್ ಫ್ಯಾಕ್ಸ್ ಎಲ್ಲಾ ಇದೆ
* 10 ಪಂಪ್ ಸೆಟ್ ಇದೆ, ಕಾಯಿ ಸುಲಿಯೋ ಮಿಷನ್ ಇದೆ, 3 ಟ್ರಾಕ್ಟರ್ ಇದೆ
* ಜ್ಯುವೆಲರಿ ಅದೆಲ್ಲಾ ಹೇಳೋಕೆ ಆಗಲ್ಲ ಪರ್ಸನಲ್ ಎಲ್ಲಾ ಹೋಗಬಾರದು
* ಗ್ರಾಮೀಣ ಮತ್ತು ನಗರ ಪ್ರದೇಶ ವಾಸ, ಪಕ್ಕಾ ಮನೆಯಲ್ಲಿ ವಾಸ
* ಮನೆಗೆ ಬೀದಿ ನೀರಿನ ಸಂಪರ್ಕ ಎಲ್ ಪಿಜಿ ಗ್ಯಾಸ್ ಬಳಕೆ
*ಎನ್ ಆರ್ ಐ ಯಾರು ಇಲ್ಲ..
* ಕೋರ್ಟ್ ವ್ತಾಜ್ಯ ಇದೆ ಎಂದು ಸಾಲು ಸಾಲು ಪ್ರಶ್ನೆಗಳಿಗೆ ಡಿಸಿಎಂ ಉತ್ತರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ