– 2023ರ ಚುನಾವಣೆಗೆ ಇದು ಟ್ರೈಯಲ್ ರನ್
ಹಾವೇರಿ: ಜಿಲ್ಲೆಯ ಜನರು ಹಣಕ್ಕಾಗಿ ಮತ ಮಾರಿಕೊಳ್ಳಲಿಲ್ಲ. ಮಾನೆಯವರನ್ನು ಗೆಲ್ಲಿಸಿದ್ದೀರಿ, ಎಲ್ಲರಿಗೂ ಅಭಿನಂದನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ಇಲ್ಲಿ ನನ್ನ ಕಾರ್ಯಕ್ರಮ ಇರಲಿಲ್ಲ. ಹಾನಗಲ್ನಲ್ಲಿ ಗ್ರಾಮದೇವತೆ, ದರ್ಗಾ ಮತ್ತು ಮಠಕ್ಕೆ ಹೋಗುವ ಕಾರ್ಯಕ್ರಮವಿತ್ತು. ನಿಮ್ಮಲ್ಲೂ ಸಂಘಟನೆ ಆಗಬೇಕು, ಬದಲಾವಣೆ ಆಗಬೇಕು. ಮುಂದಿನ ಚುನಾವಣೆಯಲ್ಲಿ ನೀವೆಲ್ಲರೂ ಇಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾನಗಲ್ನಲ್ಲಿ ಕಾಂಗ್ರೆಸ್ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ
ದೀಪಾವಳಿ ಹಬ್ಬ ಕತ್ತಲಿನಿಂದ ಬೆಳಕಿಗೆ ಹೋಗಬೇಕು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. 2023ಕ್ಕೆ ಇದು ಪ್ರಾರಂಭ. ಇದು ಮೊದಲನೇ ಚುನಾವಣೆ. ಇದು ಟ್ರೈಯಲ್ ರನ್. ನೀವೇ ಅಭ್ಯರ್ಥಿ ಅಂತಾ ತಿಳಿದು ಎಲ್ಲರೂ ಹೋರಾಟ ಮಾಡಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ ಧನ್ಯವಾದಗಳು ಎಂದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಹಾವೇರಿ ಜಿಲ್ಲೆ ಶಿಗ್ಗಾಂವಿಯ ಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ರನ್ನು ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ಜೆಸಿಬಿ ವಾಹನದ ಮೇಲಿಂದ ಹೂವು ಸುರಿದು ಅದ್ದೂರಿ ಸ್ವಾಗತ ಕೋರಿದರು.