ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕರು ಸೇರಿದಂತೆ ಡಿಕೆ ಶಿವಕುಮಾರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಂಕಟ ತರಿಸ್ತಾ ಎಂಬ ಪ್ರಶ್ನೆಯನ್ನು ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಹುಟ್ಟುಹಾಕಿದೆ.
ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿದ ಬಳಿಕ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿ, ನ್ಯಾಯಕ್ಕೆ ದೊರೆತ ಜಯ ಎಂದಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರ ಕನಸಿಗೆ ತಣ್ಣೀರೆರಚಿದಂತಾಗಿದೆ. ನಿಮ್ಮ ಒಳಗಿನ ಸಂಕಟ ಅರ್ಥವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement
ಬಹುಶಃ @siddaramaiah ನವರು ಊಹಿಸಲಾರದಂತಹ ತೀರ್ಪು ಇಂದು ದೆಹಲಿ ಹೈ ಕೋರ್ಟ್ ನೀಡಿದೆ.
ಸ್ವಪಕ್ಷೀಯ ವಿರೋಧಿಗಳು ದೂರಾದರು ಎಂಬ ಕಾರಣದಿಂದ ಹೊಸ ಹುಮ್ಮಸ್ಸು ಹಾಗೂ ಧೈರ್ಯದಿಂದ ಉಪ ಚುನಾವಣೆಗೆ ಸಿದ್ದರಾಗುತ್ತಿದ್ದ ಸಿದ್ದರಾಮಯ್ಯ ನವರ ಕನಸಿಗೆ ತಣ್ಣೀರೆರಚಿದಂತಾಗಿದೆ.
ನಿಮ್ಮ ಒಳಗಿನ ಸಂಕಟ ಅರ್ಥವಾಗುತ್ತದೆ.#DKShivakumar @INCKarnataka https://t.co/3CWHPTwOWu
— Jagadish Shettar (@JagadishShettar) October 23, 2019
Advertisement
ಜಗದೀಶ್ ಶೆಟ್ಟರ್ ಟ್ವೀಟ್: ಬಹುಶಃ ಸಿದ್ದರಾಮಯ್ಯನವರು ಊಹಿಸಲಾರದಂತಹ ತೀರ್ಪು ಇಂದು ದೆಹಲಿ ಹೈ ಕೋರ್ಟ್ ನೀಡಿದೆ. ಸ್ವಪಕ್ಷೀಯ ವಿರೋಧಿಗಳು ದೂರಾದರು ಎಂಬ ಕಾರಣದಿಂದ ಹೊಸ ಹುಮ್ಮಸ್ಸು ಹಾಗೂ ಧೈರ್ಯದಿಂದ ಉಪ ಚುನಾವಣೆಗೆ ಸಿದ್ಧರಾಗುತ್ತಿದ್ದ ಸಿದ್ದರಾಮಯ್ಯನವರ ಕನಸಿಗೆ ತಣ್ಣೀರೆರಚಿದಂತಾಗಿದೆ. ನಿಮ್ಮ ಒಳಗಿನ ಸಂಕಟ ಅರ್ಥವಾಗುತ್ತದೆ.
Advertisement
ಸಿದ್ದರಾಮಯ್ಯ ಟ್ವೀಟ್: ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ.
Advertisement
ಡಿಕೆಶಿ ಜಾಮೀನು ಆದೇಶ ಪ್ರಶ್ನಿಸಿ ಇಡಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆhttps://t.co/Q5clqDvDG5#DKShivakumar #DKShivakumarBail #DelhiHighCourt #Congress #EnforcementDirectorate #SupremeCourt
— PublicTV (@publictvnews) October 23, 2019
ಡಿ.ಕೆ.ಶಿವಕುಮಾರ್ ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.