ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ (ED) ಸಂಕಷ್ಟ ಮತ್ತೆ ಎದುರಾಗಿದ್ದು, ಇಂದು ಕೆಮ್ಮುತ್ತಲೇ ವಿಚಾರಣೆಗೆ ಹಾಜರಾಗಿದ್ದಾರೆ.
Advertisement
ಭೋಜನಾ ವಿರಾಮದ ಬಳಿಕ ಇಂದು ಮಧ್ಯಾಹ್ನ ಮೂರು ಗಂಟೆಯಿಂದ ಮತ್ತೆ ವಿಚಾರಣೆ ಪ್ರಕ್ರಿಯೆ ನಡೆದಿದೆ. ಹೊಸ ಪ್ರಕರಣ ದಾಖಲಾಗಿದೆ. ಏನ್ ಪ್ರಕರಣ ಗೊತ್ತಿಲ್ಲ. ವಿಚಾರಣೆ ಬಳಿಕ ಮಾತನಾಡುವುದಾಗಿ ಡಿಕೆಶಿ (D K Shivakumar) ಹೇಳಿದರು. ಡಿಕೆಶಿಗೆ ಈಗಾಗಲೇ ಅನಾರೋಗ್ಯ ಕಾಡಿದ್ದು, ಜ್ವರ (Fever) ಹೆಚ್ಚಾಗಿದೆ. ಹೀಗಾಗಿ ಕೆಮ್ಮುತ್ತಲೆ ವಿಚಾರಣೆಗೆ ತೆರಳಿದ್ದಾರೆ. ಸದ್ಯ ದೆಹಲಿಯ ಎಪಿಜೆ ಅಬ್ದುಲ್ ಕಲಂ ಮಾರ್ಗ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜೀವ್ ಕುಮಾರ್ ನೇತೃತ್ವದ ಅಧಿಕಾರಗಳ ತಂಡದಿಂದ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಆರ್ಥಿಕ ಇಲಾಖೆಯೇ ಎಲ್ಲಾ ಮಾಡಬೇಕಾದ್ರೆ ಸಚಿವರು ಯಾಕೆ ಬೇಕು? ಆಯನೂರು ಮಂಜುನಾಥ್ ಆಕ್ರೋಶ
Advertisement
Advertisement
ಒಟ್ಟಿನಲ್ಲಿ ಇದೀಗ ಡಿಕೆಶಿಯವರು ಸತ್ಯೇಂದ್ರ ಜೈನ್ (Sathyendra Jain) ಮಾದರಿಯಲ್ಲಿ ಜೈಲು ಸೇರುತ್ತಾರಾ ಅನ್ನೋ ಅನುಮಾನವೊಂದು ಎದ್ದಿದೆ. ಎರಡು ವರ್ಷಗಳ ಹಿಂದೆ 2020 ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸಿಬಿಐ (CBI) ದಾಖಲಿಸಿರುವ ಪ್ರಕರಣದಲ್ಲಿ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಸಿಬಿಐ ಎಫ್‍ಐಆರ್ (FIR) ಮೇಲೆ ಇಸಿಐಆರ್ ದಾಖಲಿಸಿರುವ ಇಡಿ, ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಅಂಶಗಳು ಹುಡುಕಿ ತನಿಖೆ ಮಾಡುವಂತೆ ಹೇಳಿತ್ತು. ಈ ಹಿನ್ನೆಲೆ ಇಂದು ವಿಚಾರಣೆಗಾಗಿ ಡಿಕೆಶಿಗೆ ಬುಲಾವ್ ನೀಡಲಾಯಿತು.