ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಇಂದು 11 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರೇ ಆಗಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಬಂಡಾಯ ಶಮನಕ್ಕೆ ಕೈ ಹಾಕಿದ್ದಾರೆ.
ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಡಿಕೆಶಿ ಹೈಕಮಾಂಡ್ ಸೂಚನೆ ಮೇರೆಗೆ ಅತೃಪ್ತರ ಮನವೊಲಿಸಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದರು. ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಮೇಲೆ ಗೌರವವಿದೆ. ಈ ವಿಚಾರದಲ್ಲಿ ನೀವು ಮೂಗು ತೂರಿಸಬೇಡಿ, ನಮ್ಮ ನಿರ್ಧಾರ ಅಚಲವಾಗಿದೆ. ನಾವು ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲು ಸಾಧ್ಯವಿಲ್ಲ. ಈಗಾಗಾಲೇ ನಾವು ರಾಜೀನಾಮೆ ಕೊಟ್ಟಿದ್ದೇವೆ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.
Advertisement
Advertisement
ಇದೇ ವೇಳೆ ಡಿಕೆಶಿ ಕಂಡು ಸಿಟ್ಟಾದ ರಮೇಶ್ ಜಾರಕಿಹೊಳಿ ನಿಮ್ಮ ಪ್ರಯತ್ನ ಬಿಡಿ, ಪ್ಯಾಚಪ್ ಬೇಡ ಎಂದು ಹೇಳಿದ್ದಾರೆ. ತಾಳ್ಮೆಯಿಂದ ಕಾದಿದ್ದು ಸಾಕಾಯಿತು. ಈಗ ನಾನು ಕಾಯಲ್ಲ, ಬಹಿರಂಗವಾಗಿ ಹೇಳಿದ್ದು ಆಗಿದೆ. ಹೀಗಾಗಿ ಮತ್ತೆ ನಾನು ಹಿಂದೆ ಸರಿಯಲ್ಲ. ರಾಜೀನಾಮೆಗೆ ನೀವೇ ಕಾರಣ ಅನ್ನೊದನ್ನ ಮರೆಯಬೇಡಿ ಎಂದು ರಾಮಲಿಂಗಾರೆಡ್ಡಿ ನಗುತ್ತಲೇ ಹೇಳಿದ್ದಾರೆ.
Advertisement
Advertisement
ಡಿ.ಕೆ.ಶಿವಕುಮಾರ್ ಕೊನೆಗೆ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಆದರೂ ಅತೃಪ್ತ ಶಾಸಕರು ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.