ಬೆಂಗಳೂರು: ಅದ್ಧೂರಿಯಾಗಿ ಸಿದ್ದರಾಮೋತ್ಸವ ಮಾಡುವ ಮೂಲಕ ಮುನಿಸು ಮರೆತು ಒಂದಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದೀಗ ಮತ್ತೆ ಇಮದು ಪರಸ್ಪರ ಟೋಪಿ ಬದಲಾಯಿಸಿಕೊಳ್ಳುವ ಮೂಲಕ ಒಗ್ಗಟ್ಟು ಮೆರೆದಿದ್ದಾರೆ.
ಹೌದು. ದಿನ ಹೋದಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ದೋಸ್ತಿ ಗಟ್ಟಿಯಾಗುತ್ತಿದೆ. ದಾವಣಗೆರೆ ಬಳಿಕ ಈಗ ಕೆಪಿಸಿಸಿ ಕಚೇರಿಯಲ್ಲೂ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆಗಸ್ಟ್ 15ರ ಫ್ರೀಡಂಮಾರ್ಚ್‍ಗೆ ಕಾಂಗ್ರೆಸ್ ಸಿದ್ಧತೆ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: 75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಂದು ಆಗಸ್ಟ್ 15 ರ ಫ್ರೀಡಂ ಮಾರ್ಚ್ ನಲ್ಲಿ ಧರಿಸಲಿರುವ ಟೀ ಶರ್ಟ್ ಹಾಗೂ ಹ್ಯಾಟ್ ಬಿಡುಗಡೆ ಮಾಡಿದರು. ಬಿಡುಗಡೆ ನಂತರ ಯಾರಿಗೆ ಹಾಕೋದು ಅಂತ ಸಿದ್ದರಾಮಯ್ಯ ಕೈಗೆ ಡಿಕೆಶಿ ಟೋಪಿ ಕೊಟ್ಟರು. ಈ ವೇಳೆ ಸಿದ್ದರಾಮಯ್ಯ ಅವರು, ಪಕ್ಕದಲ್ಲಿ ಕುಳಿತಿದ್ದ ಸಲೀಂ ಅಹಮ್ಮದ್ ಬಿಟ್ಟು ಅವರ ಪಕ್ಕದಲ್ಲಿ ಕುಳಿತಿದ್ದ ಕೆ.ಜೆ.ಜಾರ್ಜ್ ಗೆ ಟೋಪಿ ಹಾಕಿದರು.
ಇದೇ ವೇಳೆ ಸಿದ್ದರಾಮಯ್ಯಗೆ ಡಿಕೆಶಿ ಟೋಪಿ ಹಾಕಿದರು. ಡಿಕೆಶಿ ಟೋಪಿ ಹಾಕುತ್ತಿದ್ದಂತೆ ತಾವು ಒಂದು ಟೋಪಿ ತೆಗೆದುಕೊಂಡು ಅದನ್ನು ಡಿಕೆಶಿಗೆ ಹಾಕಿದರು. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಮ್ಮ ಲ್ಲಿ ಯಾವುದೇ ಮುನಿಸಿಲ್ಲ ಎಂಬುದನ್ನು ಸಾರಿದರು.