ಬೆಂಗಳೂರು: ಕಾಂಗ್ರೆಸ್‍ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನಡುವೆ ಮೇಲ್ಮನೆ ಟಿಕೆಟ್ ಫೈಟ್ ಆರಂಭವಾಗಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆಯ ಕುರಿತಾದ ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಟಿಕೇಟ್‍ಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಅವೆಲ್ಲ ಹೆಸರು ನಾವು ಕಳುಹಿಸಿದ್ದೇವೆ. ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಾವು ಶಿಫಾರಸ್ಸು ಮಾಡಿದ್ದನ್ನು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಇಬ್ಬರು ಕೂತುಕೊಂಡೇ ಒಮ್ಮತವಾಗಿಯೇ ಶಿಫಾರಸ್ಸು ಮಾಡಿದ್ದೇವೆ. ಇರೋದೇ ಎರಡು ಸ್ಥಾನ, ಅದಕ್ಕೆ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಶಿಫಾರಸ್ಸು ಮಾಡಿದ್ದೇವೆ. ರಾಜ್ಯಸಭೆಯದ್ದು ಇನ್ನೂ ಏನೂ ತೀರ್ಮಾನ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಬಿಪ್ಲಬ್ ದೇಬ್‌ರನ್ನು ಸ್ವಾಮಿ ವಿವೇಕಾನಂದ, ಗಾಂಧೀಜಿಗೆ ಹೋಲಿಸಿದ ಸಚಿವ ರತನ್ ಲಾಲ್ ನಾಥ್
Advertisement
Advertisement
ಒಮ್ಮತದ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಎಲ್ಲಾ ಕೂತುಕೊಂಡು ಒಮ್ಮತವಾಗಿಯೇ ಶಿಫಾರಸ್ಸು ಮಾಡಿದ್ದು, ನಾನು ಸಿದ್ದರಾಮಯ್ಯ ಕುತ್ಕೊಂಡೇ ಶಿಫಾರಸ್ಸು ಮಾಡಿದ್ದು. ಒಂದು ಅಥವಾ ಎರಡು ಹೆಸರು ನಾವು ಕೊಟ್ಟಿಲ್ಲ. ಇರೋದು ಎರಡು ಸೀಟ್ ಎಷ್ಟು ಹೆಸರು ಕೊಡೋಕೆ ಆಗುತ್ತೆ. ಎಲ್ಲಾ ವರ್ಗದದವರನ್ನು ಗಮನದಲ್ಲಿ ಇಟ್ಟುಕೊಂಡು ಶಿಫಾರಸ್ಸು ಮಾಡಲಾಗಿದೆ. ಇದನ್ನು ತಿಳಿದಿಕೊಂಡು ವರಿಷ್ಟರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
Advertisement