ತುಮಕೂರು: ನಾನು ಜೀವನದಲ್ಲಿ ಹಲವು ರೀತಿಯ ಕಷ್ಟ-ನಷ್ಟಗಳನ್ನು ಅನುಭವಿಸಿದ್ದೇನೆ. ನೆಮ್ಮದಿ, ಶಾಂತಿ ಹುಡುಕಿಕೊಂಡು ಕಾಡುಸಿದ್ದೇಶ್ವರ ಮಠಕ್ಕೆ ಬಂದಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ತಮ್ಮ ಆರಾಧ್ಯದೈವ ನೋಣವಿನಕೆರೆಯ ಕಾಡುಸಿದ್ದೇಶ್ವರ ಅಜ್ಯಯ್ಯನ ಪೀಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು, ನನ್ನ ಕುಟುಂಬ ತುಂಬಾ ಹೋರಾಟ ಮತ್ತು ಸಮಸ್ಯೆಯನ್ನು ಅನುಭವಿಸಿದ್ದೇವೆ. ಸಂಕಷ್ಟ ಬಂದಾಗ ನಾನು ಸಾವಿರಾರು ಕಡೆ ಹೋಗಿರಬಹುದು. ಆದರೆ ಕಾಡುಸಿದ್ದೇಶ್ವರ ಮಠವೇ ನನಗೆ ಶಕ್ತಿ, ಭಕ್ತಿ ಮತ್ತು ಸ್ಫೂರ್ತಿ ಎಂದರು. ಇದನ್ನೂ ಓದಿ: ಬಜೆಟ್ ಮಂಡನೆ ವೇಳೆ, ಆರಾಧ್ಯ ದೇವರ ಪೂಜೆಯಲ್ಲಿ ಡಿಕೆಶಿ ಹಾಜರ್
Advertisement
ಸೋತ ಜಾಗದಲ್ಲಿ ನೀನು ಗೆಲ್ಲಬೇಕು. ತಿರಸ್ಕಾರ ಆದ ಜಾಗದಲ್ಲೇ ಪುರಸ್ಕøತನಾಗಬೇಕು. ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು ಎಂದು ಶ್ರೀಗಳು ಹೇಳಿದ್ದಾರೆ. ಶ್ರೀಗಳ ಈ ನುಡಿಗೆ ನಾನು ಸಾಕ್ಷಿಯಾಗಿದ್ದೇನೆ ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದ್ದಾರೆ.
Advertisement
ನನಗೆ ತುಂಬಾ ಸಮಸ್ಯೆ, ನೋವು ಬಂದ್ರೂ, ನನ್ನ ಹಿಂದೆ ನಿಂತಿದ್ದು ಅಜ್ಜಯ್ಯ. ನಾನು ರಾಜ್ಯದ ಮಂತ್ರಿ ಆಗಿದ್ದು, ವಿಧಾನ ಸಭೆಯಲ್ಲಿ ಬಜೆಟ್ ನಡೆಯುತ್ತಿದೆ. ಬಜೆಟ್ ದಿನ ಬರಲು ಸಾಧ್ಯವಿಲ್ಲ ಅಂತ ನಾನು ಮೊದಲೇ ತಿಳಿಸಿದ್ದೇನೆ. ಆದ್ದರಿಂದ ನಾನು ಈ ಪವಿತ್ರ ಸ್ಥಾನಕ್ಕೆ ಬಂದು ಪೂಜೆ-ಹವನದಲ್ಲಿ ಪಾಲ್ಗೊಂಡಿದ್ದೇನೆ. ಆರಾಧ್ಯದೈವ ಅಜ್ಜಯ್ಯಗೆ ಪೂಜೆ ಮಾಡುವ ಭಾಗ್ಯ ನನಗೆ ಒದಗಿ ಬಂದಿದೆ. ಅಷ್ಟರ ಮಟ್ಟಿಗೆ ಭಕ್ತಜನ ಪರಿಪಾಲಕವಾಗಿದೆ ಶ್ರೀಮಠಖ್ಯಾತಿ ಪಡೆದಿದೆ ಎಂದರು.