ಬೆಂಗಳೂರು: ಸ್ಟಾರ್ ನಟ ಕಂ ಕೊಲೆ ಆರೋಪಿ ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ ವಿಚಾರ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
13 ಜನ ಆರೋಪಿಗಳು ಇದ್ದಾರೆ. ಬೆಳಗ್ಗೆಯಿಂದ ಟಿವಿಯವರು ಕ್ಯಾಮೆರಾ ಹಾಕೊಂಡು ಕುಳಿತಿರುತ್ತಾರೆ. ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಅವಕಾಶಬೇಕು. ಆ ದೃಷ್ಟಿಯಿಂದ ರಕ್ಷಣೆಗೆ ಶಾಮೀಯಾನ ಹಾಕಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದೇ ವೇಳೆ ದರ್ಶನ್ (Darshan) ಕೇಸ್ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡದ ಆರೋಪದ ಬಗ್ಗೆ ಮಾತನಾಡಿ, ಯಾವ ಒತ್ತಡವೂ ಇಲ್ಲ, ಏನೂ ಇಲ್ಲ ನಾನು ವಿಚಾರಿಸಿದ್ದೇನೆ. ನಮ್ಮ ಹೋಮ್ ಮಿನಿಸ್ಟರ್ ಇನ್ವಾಲ್ ಆಗಿಲ್ಲ. ಯಾರೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದ ಬಗ್ಗೆ ನಾವು ರೆಸ್ಪಾನ್ಸ್ ಸಹ ಮಾಡ್ತಿಲ್ಲ ಎಮದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ 15 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ (ಗುರುವಾರ) ಪೊಲೀಸರು ಏಕಾಏಕಿ ಠಾಣೆಯ ಸೈಡ್‍ವಾಲ್‍ಗೆ ಶಾಮಿಯಾನ ಹಾಕಿದ್ದಾರೆ. ಜೊತೆಗೆ ಠಾಣೆ ಬಳಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಇದರು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.