ತುಮಕೂರು: ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯನವರೇ ಆಗಿದ್ದು ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲಿ ಬೆಸ್ಕಾಂನ ಒಕ್ಕಲಿಗ ನೌಕರರು ಆಯೋಜಿಸಿದ್ದ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು ಗೃಹ ಖಾತೆಯ ಆಕಾಂಕ್ಷಿಯಲ್ಲ. ಸದ್ಯ ನನ್ನನ್ನು ಫ್ರೀ ಆಗಿ ನೆಮ್ಮದಿಯಿಂದ ಇರಲು ಬಿಟ್ಟರೆ ಸಾಕು ಎಂದು ಹೇಳಿದರು.
Advertisement
ನನ್ನ ಆಪ್ತ ಎನ್ನಲಾದ ವರಪ್ರಸಾದ್ ರೆಡ್ಡಿ ಕಾಂಗ್ರೆಸ್ ಗೆ ತೊರೆದು ಬಿಜೆಪಿಗೆ ಸೇರಿರೋದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುವುದು ಬೇಡ. ಅವರು ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿ. ಆತ ನನ್ನ ಆಪ್ತ ಅನ್ನೋದಕ್ಕಿಂತ ಕಾಂಗ್ರೆಸ್‍ನಿಂದ ಟಿಕೆಟ್ ಕೊಟ್ಟಿದ್ದೇವೆ ಅಷ್ಟೇ. ಯಾವ ಎಂಎಲ್‍ಎ, ಮಂತ್ರಿ ಹೋದರೂ ಏನು ಆಗಲ್ಲ. ಕಾಂಗ್ರೆಸ್ ಬಲಿಷ್ಠವಾಗಿರುತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಪ್ರತಿಕ್ರಿಯೆ ನೀಡಿದರು.
Advertisement
ಜೆಡಿಎಸ್ ಅತೃಪ್ತರು ಕಾಂಗ್ರೆಸ್ ಗೆ ಬರುವುದಕ್ಕೆ ಕೆಲವರ ವಿರೋಧ ವ್ಯಕ್ತವಾಗುವುದು ಸಹಜ. ಪಾರ್ಟಿಗೆ ಗೆಲ್ಲುವ ಅಭ್ಯರ್ಥಿಗಳನ್ನ ನಾವು ತೆಗೆದುಕೊಳ್ಳಬೆಕಾಗುತ್ತದೆ. ನಮಗೆ ಗೆಲ್ಲುವ ಅಭ್ಯರ್ಥಿ ತುಂಬಾ ಮುಖ್ಯ. ಆ ದೃಷ್ಟಿಯಿಂದ ಕಾಂಗ್ರೆಸ್ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳತ್ತದೆ ಎಂದು ಹೇಳಿದರು.
Advertisement
ಹಿಂದೆ ನೆಲಮಂಗಲದಲ್ಲಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದರು. ಮಾಗಡಿ ತಾಲೂಕಿನ ಜನರು ಆಸೆ ಪಟ್ಟರೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನನ್ನು ಗೆಲ್ಲಿಸಿದರೆ ಮುಂದಿನ ಸಿಎಂ ನಾನೇ ಆಗುತ್ತೇನೆ. ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‍ಗೆ ಬಂದ ಕೇವಲ 3 ವರ್ಷದಲ್ಲಿ ಮುಖ್ಯಮಂತ್ರಿಯಾದವರು. ಆದರೂ ನನಗೆ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ನಾನು ಮಂತ್ರಿ ಸ್ಥಾನ ನೀವು ಕೊಟ್ಟಿರುವ ಪ್ರಸಾದ ಅಂತ ಕಾಯುತ್ತಿರಲಿಲ್ವ ಎಂದು ಹೇಳುವ ಮೂಲಕ ಸಿಎಂಗೆ ಡಿಕೆಶಿ ಟಾಂಗ್ ನೀಡಿದ್ದರು.
Advertisement
https://www.youtube.com/watch?v=xe5IdcJyVqo