ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇನ್ನು ಮುಂದೆ ಪೆನ್‌ಡ್ರೈವ್ (Pendrive Case) ಬಗ್ಗೆ ಮಾತನಾಡೋದೆ ಬೇಡ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ (GC Chandrashekhar) ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕತ್ವ ಅಂದರೆ ಅದು ಮಹತ್ವದ ಸ್ಥಾನ. ಆ ಸ್ಥಾನಕ್ಕೆ ಮೆರುಗು ನೀಡುವ ವ್ಯಕ್ತಿಗಳು ಅಲ್ಲಿ ಕೂರಬೇಕು. ಕೀಳು ದರ್ಜೆಯ ಭಾಷೆ ಉಪಯೋಗಿಸುವುದು ವಿಪಕ್ಷಗಳಿಗೆ ಶೋಭೆ ತರುವುದಿಲ್ಲ. ಸ್ವಲ್ಪ ಹೋಂ ವರ್ಕ್ ಮಾಡಿ ವಿಪಕ್ಷ ನಾಯಕರು ಮಾತನಾಡಬೇಕು. ಕಾಂಗ್ರೆಸ್ ನಾಯಕತ್ವ ಬಲಿಷ್ಟ ನಾಯಕತ್ವ. ಡಿಕೆಶಿ, ಸಿದ್ದರಾಮಯ್ಯ ತರಹದ ನಾಯಕತ್ವ ಬೇರೆಲ್ಲೂ ಇಲ್ಲ. ಅವರು ಏನೇ ಮಾಡಿದರೂ ಸರ್ಕಾರವನ್ನು ಅಲುಗಾಡಿಸುವ ಯೋಗ್ಯತೆಯೇ ಇಲ್ಲ. ಕೆಲವು ಬಾರಿ ಆರ್.ಅಶೋಕ್ ಮಾತನಾಡುವುದನ್ನು ನೋಡಿದರೆ ಇವರಿಗಿಂತ ಸಿಟಿ ರವಿಯೇ ಬೆಸ್ಟ್ ಅನಿಸುತ್ತದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ
Advertisement
Advertisement
ಸಿಟಿ ರವಿ ಕೂಡ ಕೆಲವೊಮ್ಮೆ ಅಶ್ಲೀಲವಾಗಿ ಮಾತನಾಡುತ್ತಾರೆ. ಆದರೆ ಅಶೋಕ್‌ಗಿಂತ ಸಿ.ಟಿ ರವಿಯೇ ಬೆಸ್ಟ್ ಅನಿಸುತ್ತದೆ. ಕುಮಾರಸ್ವಾಮಿ (HD Kumaraswamy) ಇಡೀ ತನಿಖೆಯೇ ಹಳ್ಳ ಹಿಡಿಯುವಂತೆ ಮಾತನಾಡುತ್ತಿದ್ದಾರೆ. ಇವರು ಹೇಳಿದ ಹಾಗೇ ಎಸ್‌ಐಟಿ ನಡೆಯಬೇಕು. ಇವರು ಹೇಳಿದ ಹಾಗೆ ತನಿಖೆ ನಡೆಯಬೇಕು. ಯಾರು ಯಾರನ್ನೂ ಕೆಣಕಿಲ್ಲ. ಕುಮಾರಸ್ವಾಮಿ ಅವರೇ ದೇವೇಗೌಡರಿಗೆ ನೋವಾಗಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ಡಿಕೆ ಶಿವಕುಮಾರ್ ಅವರಿಗೆ ನಾವು ಕೇಳಿಕೊಳ್ಳೋದು ಇಷ್ಟೇ. ಇನ್ನು ಮುಂದೆ ಪೆನ್‌ಡ್ರೈವ್ ವಿಚಾರದಲ್ಲಿ ಮಾತೇ ಆಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ
Advertisement
Advertisement
ದೇವೇಗೌಡರ ಕುಟುಂಬದ ಬಗ್ಗೆ ಗೌರವವಿದೆ. ಯಾವ ರಾಜಕಾರಣಿ ಕೂಡ ಕುಟುಂಬದಲ್ಲಿ ಈ ರೀತಿ ನಡೆಯಬೇಕು ಎಂದು ಭಾವಿಸುವುದಿಲ್ಲ. ಕುಮಾರಸ್ವಾಮಿ ಅವರು ಪ್ರಕರಣವನ್ನು ನೆಲ ಕಚ್ಚಿಸುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು ನೀವು. ಇವರು ಹೇಳಿದ ಹಾಗೇ ನಡೆಯಬೇಕು. ಎಸ್‌ಐಟಿ ತನಿಖೆ ಆಗಬೇಕಾ? ಸರ್ ದಯವಿಟ್ಟು ಈ ಪ್ರಕರಣದಲ್ಲಿ ಯಾರು ರಿಯಾಕ್ಟ್ ಮಾಡಬೇಡಿ. ಸರ್ಕಾರ ಅದರ ಪಾಡಿಗೆ ಅದು ನಡೆಯುತ್ತಿದೆ. ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡೋಣ. ಯಾರು ಯಾರನ್ನೂ ಕೆಣಕಿಲ್ಲ ಕುಮಾರಸ್ವಾಮಿ ಅವರೇ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ