ಪಾಟ್ನ: ಕನ್ವರ್ ಯಾತ್ರೆ (Kanwar Yatra) ವೇಳೆ ಡಿಜೆ ವಾಹನಕ್ಕೆ (DJ Vehicle) ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ (Electrocuted) ಹೊಡೆದು 9 ಮಂದಿ ಕನ್ವರ್ ಯಾತ್ರಿಗಳು ಸಾವನ್ನಪ್ಪಿದ ಘಟನೆ ಬಿಹಾರದ (Bihar) ವೈಶಾಲಿಯಲ್ಲಿ ನಡೆದಿದೆ.
ಹಾಜಿಪುರ ಕೈಗಾರಿಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಲ್ತಾನ್ಪುರ ಗ್ರಾಮದ ಯುವಕರನ್ನು ಒಳಗೊಂಡ ತಂಡವು ಸೋನ್ಪುರ ಬಾಬಾ ಹರಿಹರನಾಥದಲ್ಲಿ ‘ಜಲಾಭಿಷೇಕ’ ಮಾಡಲು ಗಂಗಾಜಲವನ್ನು ಹೊತ್ತು ಸರನ್ನ ಪಹೇಲಜಾ ಘಾಟ್ಗೆ ತೆರಳುತ್ತಿತ್ತು. ಈ ವೇಳೆ ಡಿಜೆ ಹಾಡುಗಳೊಂದಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್ನ ಹೈಟೆನ್ಷನ್ ತಂತಿಗೆ ಡಿಜೆ ವಾಹನದ ಮೇಲ್ಭಾಗ ತಾಗಿ ದುರಂತ ಸಂಭವಿಸಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್ ರದ್ದು
Advertisement
Advertisement
ಕನ್ವರಿಯಾಗಳು ಅಥವಾ ಶಿವಭಕ್ತರು ಡಿಜೆ ವಾಹನದಲ್ಲಿ ತೆರಳುತ್ತಿದ್ದರು. ವಾಹನ ತುಂಬಾ ಎತ್ತರವಾಗಿದ್ದರಿಂದ ಹೈಟೆನ್ಷನ್ ತಂತಿಗೆ ಸಿಕ್ಕಿಹಾಕಿಕೊಂಡು ಘಟನೆ ಸಂಭವಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಎನ್ಐಎಯಿಂದ ಸ್ಪಾಟ್ ಮಹಜರು
Advertisement
ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!
Advertisement
ಕನ್ವಾರಿಯಾಗಳು ಅಥವಾ ಶಿವಭಕ್ತರು ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಪಿಸಲು ತಮ್ಮ ಊರಿನಿಂದ ಗಂಗಾಜಲವನ್ನು ಒಯ್ಯುತ್ತಾರೆ. ಕನ್ವರ್ ಯಾತ್ರೆಯು ಪ್ರತಿ ವರ್ಷ ನಡೆಯುವ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ