– 19 ಬೈಕ್ ಪೊಲೀಸ್ ವಶಕ್ಕೆ
ಬೆಂಗಳೂರು: ಜಾಲಿ ರೈಡ್ ಹೋಗಲು ಬೈಕ್ ಕಳ್ಳತವನ್ನೇ ವೃತ್ತಿಯಾಗಿಸಿಕೊಂಡಿದ್ದ ಖದೀಮರನ್ನು ಡಿ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರ್ಬಾಜ್ ಖಾನ್ (21), ಮೊಹಮ್ಮದ್ ಸೂಫಿಯಾನ್ (24) ಬಂಧಿತ ಆರೋಪಿಗಳು. ಡಿ.ಜಿ.ಹಳ್ಳಿ ನಿವಾಸಿಗಳಿದ್ದ ಆರೋಪಿಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಟು ಬೈಕ್ ಕಳ್ಳತನ ಮಾಡಿ ಪೊಲೀಸರಿಗೆ ತಲೆ ನೋವಾಗಿದ್ದರು. ಅಲ್ಲದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸಾಕಷ್ಟು ಬೈಕ್‍ಗಳ ಕಳ್ಳ ಪ್ರಕರಣಗಳು ದಾಖಲಾಗಿತ್ತು.
Advertisement
Advertisement
ಬೈಕ್ ಕಳ್ಳತನ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು ಖದೀಮರ ಜಾಡು ಹಿಡಿದು ಬಲೆಗೆ ಬಿಳಿಸಲು ರಾತ್ರಿ ಗಸ್ತು ಹೆಚ್ಚು ಆರಂಭಿಸಿದ್ದರು. ರಾತ್ರಿ ವೇಳೆಯೇ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ನಡೆಯುತ್ತಿತ್ತು. ಆರೋಪಿಗಳಿಬ್ಬರು ರಾತ್ರಿ ವೇಳೆ ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಆದ್ದರಿಂದ ರಾತ್ರಿ ವೇಳೆಯೇ ಹೆಚ್ಚಿನ ಭದ್ರತೆ ಹಾಕಿ ನಿಗಾ ವಹಿಸಿದ್ದರು.
Advertisement
ಕಳೆದ ತಿಂಗಳ ಕೊನೆಯ ವಾರದಲ್ಲಿ ನಡೆದಿದ್ದ ಬೈಕ್ ಕಳ್ಳತನ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಿದ ವೇಳೆ ಆರೋಪಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಆಧರಿಸಿ ಆರೋಪಿಗಳು ಇದುವರೆಗೂ ಕಳ್ಳತನ ಮಾಡಿದ್ದ ಬೈಕ್‍ಗಳನ್ನು ಪತ್ತೆ ಮಾಡುವ ಕಾರ್ಯ ಮಾಡಿದ್ದಾರೆ.
Advertisement
ವಿಚಾರಣೆ ವೇಳೆ ಆರೋಪಿಗಳು ಕಳ್ಳತನ ಮಾಡಲು ಕಾರಣವೇನು ಎಂಬುವದನ್ನು ಪ್ರಶ್ನೆ ಮಾಡಿದ್ದು, ಜಾಲಿ ರೈಡ್ ಮಾಡಲು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದಾಗಿ ಬಂಧಿತರು ತಿಳಿಸಿದ್ದಾರೆ. ಸದ್ಯ ಆರೋಪಿಗಳಿಂದ 19 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಿದ್ದಾರೆ. ಅಲ್ಲದೇ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ಹೊರತು ಪಡಿಸಿ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಮೇಲೆ ಕಳ್ಳತನ ಪ್ರಕರಗಣಲು ದಾಖಲಾಗಿರುವ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.