ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ (DJ Halli, KG Halli) ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಮೂವರು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ (NIA) ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
2020 ಆಗಸ್ಟ್ 12ರಂದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಸಂಬಂಧ 187 ಆರೋಪಿಗಳನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಪ್ರತ್ಯೇಕ ಪ್ರಕರಣ ವಿಚಾರಣೆಯಲ್ಲಿ ಮೂವರು ಅಪರಾಧಿಗಳು ದೋಷಿಗಳೆಂದು ಎನ್‌ಐಎ ಕೋರ್ಟ್ ತೀರ್ಪು ನೀಡಿದೆ. ಸೈದ್ ಇಕ್ರಾಮುದ್ದೀನ್, ಸೈಯದ್ ಆಸೀಫ್, ಮಹಮ್ಮದ್ ಆಸೀಫ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: Gujarat | ಅಲ್-ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ನಾಲ್ವರು ಉಗ್ರರ ಬಂಧನ
ಇನ್ನು ಅಪರಾಧಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರೆಂದು ಎನ್‌ಐಎ ತಮ್ಮ ವಾದದಲ್ಲಿ ಮಂಡನೆ ಮಾಡಿತ್ತು. ವಾದವನ್ನು ಒಪ್ಪಿದ ನ್ಯಾಯಾಲಯ ಆಪಾದಿತರಿಗೆ ಪಿಎಫ್‌ಐ ನಂಟಿದೆ ಎಂಬುದನ್ನು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಎನ್‌ಐಎ ಪರವಾಗಿ ಹಿರಿಯ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ದರು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2020 ರಿಂದ ಇಲ್ಲಿಯವರೆಗೆ 343 ಬಾರಿ ಪಕ್ಷಿಗಳು ಡಿಕ್ಕಿ