ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ರಿಯಲ್ ಸ್ಟಾರ್ ಉಪೇಂದ್ರ (Upendra) ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಮಂಜುನಾಥ್. ಡಿ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ (DJ Chakravarty) ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ (Title) ಅನಾವರಣಗೊಳಿಸಿದ್ದಾರೆ.
ಚಿತ್ರದ ಹೆಸರು ‘ಹುಲಿ ನಾಯಕ’ (Huli Nayaka) ಎಂದು ಘೋಷಣೆ ಮಾಡಿದ ಉಪೇಂದ್ರ, ಈ ಐತಿಹಾಸಿಕ ಚಿತ್ರ ಯಶಸ್ವಿಯಾಗಲಿ. ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಧನ್ಯಾ, ಶರ್ಮಿಳಾ ಮಾಂಡ್ರೆ ಜೊತೆ ದಿಗಂತ್ ಡ್ಯುಯೇಟ್
ಅನ್ ಲಾಕ್ ರಾಘವ ನಂತರ ಮಿಲಿಂದ್ ಗೌತಮ್ (Milind Gautam) ಸತತ ಮೂರು ತಿಂಗಳುಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.
Web Stories