ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ದೀಪಾವಳಿಯಲ್ಲಿ ಸಿಹಿ ತಿನಿಸುಗಳು ಕೂಡ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಈ ವರ್ಷದ ಹಬ್ಬಕ್ಕೆ ನೀವು ವಿಶೇಷವಾದ ತಿನಿಸು ಮಾಡಬೇಕು ಎಂದರೆ ಸಿಂಪಲ್ ಆಗಿ ಕ್ಯಾರೆಟ್ ಬಾದಾಮಿ ಹಲ್ವಾ(Carrot Almond Halwa) ಮಾಡಲು ಪ್ರಯತ್ನಿಸಿ. ಈ ಹಲ್ವಾ ಸಾಮಾನ್ಯ ಕ್ಯಾರೆಟ್ ಹಲ್ವಾಕ್ಕಿಂತ ರುಚಿಯಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕ್ಯಾರೆಟ್ ಬಾದಾಮಿ ಹಲ್ವಾ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
Advertisement
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ – 1/4 ಕೆ.ಜಿ
ತುಪ್ಪ – 1/4 ಕಪ್
ಬಾದಾಮಿ – 1/2 ಕಪ್
ಕೇಸರಿ – ಸ್ವಲ್ಪ
ಹಾಲು – 1 ಕಪ್
ಸಕ್ಕರೆ – 1/2 ಕಪ್
Advertisement
Advertisement
ಮಾಡುವ ವಿಧಾನ:
*ಮೊದಲು ಕ್ಯಾರೆಟ್‌ಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ ಒಂದು ಕಪ್ ಹಾಲು ಸೇರಿಸಿ. ಇದಕ್ಕೆ ಚಿಟಿಕೆ ಕೇಸರಿ ದಳ ಹಾಕಿ. ಒಂದೆರಡು ವಿಶಲ್ ಕೂಗಿಸಿ. ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
*ಬಳಿಕ ಮೊದಲೇ ನೆನೆಸಿಟ್ಟುಕೊಂಡ ಬಾದಾಮಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
*ಈಗ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ನಂತರ ರುಬ್ಬಿಟ್ಟುಕೊಂಡ ಬಾದಾಮಿ ಹಾಗೂ ರುಬ್ಬಿದ ಕ್ಯಾರೆಟ್ ಮಿಶ್ರಣ ಹಾಕಿ ತುಪ್ಪದ ಜೊತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
*ನಂತರ ಬಾದಾಮಿ, ಕ್ಯಾರೆಟ್ ಪೇಸ್ಟ್ ತಳ ಬಿಡಲು ಆರಂಭವಾದಾಗ ಅದಕ್ಕೆ ಸಕ್ಕರೆ ಹಾಕಿ, ಅದು ಕರಗಿದ ಮೇಲೆ ಪಾಕವನ್ನು ಚೆನ್ನಾಗಿ ತಿರುಗಿಸಿಕೊಳ್ಳಿ.
*ಈಗ ರುಚಿಯಾದ ಕ್ಯಾರೆಟ್ ಬಾದಾಮ್ ಹಲ್ವಾ ಸವಿಯಲು ಸಿದ್ಧ.
Advertisement