ಹಬ್ಬ (Festive) ಹರಿದಿನ ಬಂತಂದ್ರೆ ರುಚಿಕರವಾದ ಹಾಗೂ ಸ್ವಾದಿಷ್ಟವಾದ ತಿಂಡಿ ತಿನಿಸುಗಳು ಹೆಚ್ಚಿರುತ್ತೆ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿಯಲ್ಲಂತೂ (Diwali) ಇನ್ನೂ ಅದ್ಧೂರಿತನವಿರುತ್ತೆ. ದೀಪ ಬೆಳಗಿಸುವ ಜೊತೆಗೆ ಸ್ವಾದಿಷ್ಟ ತಿನಿಸುಗಳು ಹೆಚ್ಚಿರುತ್ತೆ. ರಜಾ ಮಜಾವನ್ನು ಸವಿಯುತ್ತಾ ಯಾವುದೇ ಚಿಂತೆಯಿಲ್ಲದೇ ರುಚಿಕರ ಆಹಾರವನ್ನು ಅಥವಾ ಕರಿದ ತಿನಿಸುಗಳನ್ನು ಹೆಚ್ಚಾಗಿ ತಿನ್ನುವುದು ಜೊತೆಗೆ ಕೆಲವು ದಿನಚರಿಯಲ್ಲಾದ ಬದಲಾವಣೆಯಿಂದಾಗಿ ನಮ್ಮ ಆರೋಗ್ಯ (Health) ಹದಗೆಡುವ ಸಾಧ್ಯತೆಯಿರುತ್ತೆ. ಈ ರೀತಿ ಆಗದಿರಲು ಕೆಲವು ಮುನ್ನೆಚ್ಚರಿಕೆಯನ್ನು ಅನುಸರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.
Advertisement
ನಿದ್ರೆ ಸರಿಯಾಗಿ ಮಾಡಿ: ಆಹಾರ, ವ್ಯಾಯಾಮ, ನಿದ್ರೆ ಮನುಷ್ಯನ ಆಧಾರ ಸ್ತಂಭ ಎಂದರೆ ತಪ್ಪಾಗದು. ಆರೋಗ್ಯಸ್ಥ ಮನುಷ್ಯನಿಗೆ ನಿದ್ರೆ ಹಾಗೂ ಆಹಾರ ಸರಿಯಾದರೆ ಮಾತ್ರ ದಿನವನ್ನು ಫ್ರೆಶ್ ಆಗಿ ಕಳೆಯಬಹುದು. ಹೀಗಾಗಿ ದಿನಕ್ಕೆ 7-8 ತಾಸು ಸರಿಯಾಗಿ ನಿದ್ದೆ ಮಾಡಿ.
Advertisement
Advertisement
ಸಮಯಕ್ಕೆ ಸರಿಯಾಗಿ ತಿನ್ನಿ: ಹಬ್ಬ ಹರಿದಿನವೊಂದೇ ಅಲ್ಲದೇ ಪ್ರತಿನಿತ್ಯ ನಿಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಸಮಯಕ್ಕೆ ಸರಿಯಾಗಿ ತಿನ್ನಿರಿ. ದಿನಕ್ಕೆ 2 ಅಥವಾ ಮೂರು ಬಾರಿ ಆಹಾರವನ್ನು ಸೇವಿಸುವುದು ಅತ್ಯವಶ್ಯವಾಗಿರುತ್ತದೆ. ಒಂದು ವೇಳೆ ನಿಮಗೆ ಹಸಿವಾಗಿಲ್ಲವೆಂದರೂ, ಹಣ್ಣು/ ತರಕಾರಿ ರಸವನ್ನು ಸೇವಿಸಿ. ಇದರಿಂದಾಗಿ ನಿಮ್ಮ ಚಯಪಚಯವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ
Advertisement
ಊಟಗಳ ನಡುವೆ 4-6 ಗಂಟೆಗಳ ಅಂತರವಿರಲಿ: ಬೆಳಗ್ಗೆ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ ಮಧ್ಯಾಹ್ನ ಅಥವಾ ರಾತ್ರಿಯ ಊಟ ಮಾಡಲು 4-5 ಗಂಟೆಗಳ ಅಂತರವನ್ನು ನೀಡುವುದು ಅತ್ಯವಶ್ಯವಾಗಿರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಜೊತೆಗೆ ಆರೋಗ್ಯ ಹದಗೆಟ್ಟುವುದನ್ನು ಕಡಿಮೆ ಮಾಡುತ್ತದೆ.
ಮಸಾಲೆ ಪದಾರ್ಥದಲ್ಲಿ ತಾಜಾ ಇರುವುದನ್ನು ಬಳಸಿ: ಅಡುಗೆಯನ್ನು ಮಾಡುವಾಗ ಸಾವಯವ ಅಥವಾ ತಾಜಾ ಅರಿಶಿನ ಪುಡಿ ಕಾಳು ಮೆಣಸು ಬಳಸಿ. ಅಷ್ಟೇ ಅಲ್ಲದೇ ಅಕ್ಕಿ ಗಂಜಿಯನ್ನು ಸೇವಿಸುವುದರಿಂದ ಹೊಟ್ಟೆ ಹೆಚ್ಚು ಭಾರವೆನಿಸುವುದಿಲ್ಲ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು
ಕುದಿಸಿ ಆರಿದ 1 ಗ್ಲಾಸ್ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯಿರಿ: ಹಬ್ಬದಲ್ಲಿ ಸಿಹಿ ತಿನಿಸು, ಖರೀದ ಆಹಾರವನ್ನು ತಿನ್ನುವುದು ಸಾಮಾನ್ಯ. ಊಟದಲ್ಲೂ ವಿವಿಧ ಬಗೆಯ ತಿಂಡಿಗಳು ಇರುತ್ತವೆ. ಇದೆಲ್ಲಾ ತಿಂದಾಗ ನಮಗೆ ಹೊಟ್ಟೆ ಭಾರವೆನಿಸುವುದು ಸಹಜ. ಅಂತಹ ಸಂದರ್ಭದಲ್ಲಿ ಸ್ವಲ್ಪ ಬಿಸಿ ಇರುವ ನೀರಿಗೆ ನಿಂಬೆ ರಸವನ್ನು ಹಾಕಿ ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚಳವಾಗುತ್ತದೆ.