ಬೆಂಗಳೂರು: ಕೋವಿಡ್-19 ಭೀತಿ ನಡುವೆ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶನಿವಾರ ಮಾರ್ಗಸೂಚಿ ಪ್ರಕಟಿಸಿದೆ.
ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಮಳಿಗೆಗಳಿಗೆ ಅವಕಾಶ ನೀಡಿದೆ. ಜನರು ಸಹ ಹಸಿರು ಪಟಾಕಿ ಸಿಡಿಸಿ, ಪರಿಸರ ಹಾನಿ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಲಾಗಿದೆ. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ
ನವೆಂಬರ್ 1ರಿಂದ 10ರವರೆಗೆ ಮಾರಾಟ ಮಳಿಗೆಗಳನ್ನು ತೆರೆಯಬಹುದು. ಕೋವಿಡ್ ಹಿನ್ನೆಲೆಯಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದೆ.
ಜೋರು ಶಬ್ದ ಮಾಡುವ, ವಾಯು ಮಾಲಿನ್ಯ ಮಾಡುವ ಪಟಾಕಿಗಳಿಗೆ ಎನ್‍ಜಿಟಿ ಈಗಾಗಲೇ ಬ್ರೇಕ್ ಹಾಕಿದೆ. ಪಟಾಕಿ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಾಡುವ ನಿಯಮಗಳನ್ನು ಸರ್ಕಾರ, ಬಿಬಿಎಂಪಿಯೂ ಪಾಲಿಸಬೇಕಾಗುತ್ತದೆ. ಹೀಗಾಗಿ ಬೇರೆ ಪಟಾಕಿಗಳ ಮಾರಟ ಖರೀದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ಬಿಬಿಎಂಪಿ ಮುಖ್ಯಾಯುಕ್ತರಾದ ಗೌರವ್ ಗುಪ್ತ ಹೇಳಿದ್ದರು. ಇದನ್ನೂ ಓದಿ: ಆರ್ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ