ನವದೆಹಲಿ: ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೇಂದ್ರ ಸರ್ಕಾರ ದೀಪಾವಳಿ ಗಿಫ್ಟ್ ನೀಡಿದೆ. ಬೆಲೆ ಏರಿಕೆಯ ಬಿಸಿ ತಡೆಯಲು, ಮತ್ತೊಮ್ಮೆ ಭಾರತ್ ಬ್ರಾಂಡ್-2.0 ಅನ್ನು ಆರಂಭಿಸಲಾಗಿದೆ. ಲೋಕಸಭೆ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಭಾರತ್ ಬ್ರ್ಯಾಂಡ್ (Bharat Brand) ಅಕ್ಕಿ ಜೊತೆ ಮೂರು ಧಾನ್ಯಗಳು ಬೆಂಗಳೂರಲ್ಲಿ (Bengaluru) ಇಂದಿನಿಂದ ಜನರಿಗೆ ಸಿಗಲಿವೆ.
ಇತ್ತೀಚಿನ ದಿನಗಳಲ್ಲಿ ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಿಂದೆ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡಿತ್ತು. ಆದರೆ ಲೋಕಸಭಾ ಚುನಾವಣೆ ನೀತಿಸಂಹಿತೆ ಹಿನ್ನೆಲೆ, ಸ್ಥಗಿತಗೊಂಡಿದ್ದ ಭಾರತ್ ಬ್ರಾಂಡ್ 2.0ವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಆರಂಭಿಸಿದೆ. ಇದರ ಭಾಗವಾಗಿ ಇಂದಿನಿಂದ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿಹಿಟ್ಟು, ಕಡಲೆಬೇಳೆ, ಹೆಸರು ಬೇಳೆಯನ್ನು ಮಾರಾಟ ಮಾಡಲು ಮುಂದಾಗಿದೆ. ಇದನ್ನೂ ಓದಿ: ದೀಪಾವಳಿ| ಸಾಲು ಸಾಲು ರಜೆ ಹಿನ್ನೆಲೆ ಊರುಗಳತ್ತ ಜನ – ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್
ಈ ಹಿಂದೆ ಭಾರತ್ ರೈಸ್ ಕೆ.ಜಿಗೆ 29 ರೂಪಾಯಿ ಇತ್ತು. ಇದೀಗ ಈ ಭಾರತ್ ಬ್ರ್ಯಾಂಡ್‌ನ ಅಕ್ಕಿ 34 ರೂಪಾಯಿ ಆಗಿದೆ. ಹಾಗೆಯೇ ಗೋದಿ ಹಿಟ್ಟು ಕೆ.ಜಿಗೆ 30 ರೂಪಾಯಿ, ಕಡಲೆಬೇಳೆ 70 ರೂಪಾಯಿ, ಹೆಸರುಬೇಳೆ 107 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬಾಗೇಪಲ್ಲಿ ಗೇಟ್ ಬಳಿ ದರ್ಶನ್ ಕಾರು ಅಡ್ಡಗಟ್ಟಿದ ಅಭಿಮಾನಿಗಳು

