ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿ ಪ್ರಜೆಗಳಿಗೆ ದೀಪಾಳಿ ಉಡುಗೊರೆಯನ್ನು ನೀಡಿದ್ದಾರೆ. ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಿರುವ ಪಾಕ್ ಪ್ರಜೆಗಳಲ್ಲಿ ಅರ್ಹರಾಗಿರುವ ಎಲ್ಲಾ ಅರ್ಜಿದಾರರಿಗೆ ವೀಸಾ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಅವರು ತಮ್ಮ ಟ್ವೀಟ್‍ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಹ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
Advertisement
ಅಕ್ಟೋಬರ್ 18 ರಂದು ಪಾಕಿಸ್ತಾನದ 5 ಪ್ರಜೆಗಳಿಗೆ ಸುಷ್ಮಾ ಸ್ವರಾಜ್ ಸ್ವತಃ ತಾವೇ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲು ತಿಳಿಸಿ ಅನುಮತಿಯನ್ನು ನೀಡಿದ್ದರು. ಅಲ್ಲದೇ ಈ ಹಿಂದೆಯೂ ಹಲವು ಬಾರಿ ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲಾಗಿತ್ತು.
Advertisement
ಸುಷ್ಮಾ ಸ್ವರಾಜ್ ಅವರ ಈ ಗುಣ ಹಲವು ಭಾರತೀಯ ಪ್ರಜೆಗಳ ಮನಸ್ಸನ್ನು ಗೆದ್ದಿದೆ. ಅಲ್ಲದೇ ಈ ಹಿಂದೆ ಭಾರತದ ವೀಸಾ ಪಡೆದ ಪಾಕ್ ಪ್ರಜೆಯೊಬ್ಬರು ಪಾಕಿಸ್ತಾನಕ್ಕೆ ಸುಷ್ಮಾ ಅವರು ಪ್ರಧಾನಿಯಾಗಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಟ್ವಿಟ್ಟರ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
Advertisement
On the auspicious occasion of Deepawali, India will grant medical Visa in all deserving cases pending today. @IndiainPakistan
— Sushma Swaraj (@SushmaSwaraj) October 19, 2017
Advertisement
We will issue visa to facilitate treatment of your 8 year old child in India. https://t.co/416vzZsWox
— Sushma Swaraj (@SushmaSwaraj) October 18, 2017