ದೀಪಾವಳಿ ಭಾರತದ ಅತ್ಯಂತ ಪ್ರಾಚೀನ ಹಬ್ಬ ಭಾರತೀಯ ಪುರಾಣಗಳಲ್ಲಿ, ಸಂಸ್ಕೃತ ಕಾವ್ಯಗಳಲ್ಲಿ ಈ ಹಬ್ಬದ ವರ್ಣನೆ ಇದೆ. ದೀಪಾವಳಿ ಆಚರಣೆಗೆ ಅನೇಕ ಪುರಾಣ ಪುಣ್ಯಕಥೆಗಳ ಹಿನ್ನೆಲೆಯೂ ಇದೆ.
ಪ್ರಾಚೀನ ಕಾಲದಲ್ಲಿ ದೀಪಾವಳಿಗೆ ವಿಭಿನ್ನ ಹೆಸರುಗಳಿದ್ದವು. ಈಗ ದೀಪಾವಳಿ ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ ದಿವಾಲಿ ಎಂದು ಕರೆಯುತ್ತಾರೆ. ಹರ್ಷರಾಜ ಇದನ್ನು ‘ದೀಪ ಪ್ರತಿಪದೋತ್ಸವ’ ಎಂದು ಕರೆದಿದ್ದ. ಭೋಜ ರಾಜ ಇದನ್ನೇ ‘ಸುಖಾರತಿ’ ಎಂದು ಉಲ್ಲೇಖಿಸಿದ್ದಾನೆ. ಜೈನ ಗ್ರಂಥಗಳಲ್ಲಿ ಈ ಹಬ್ಬವನ್ನು ʻದೀಪಾಲಿಕಾ’ ಎಂದು ಕರೆಯಲಾಗುತ್ತದೆ. ಭಾರತ, ನೇಪಾಳ, ಬಾಂಗ್ಲಾದೇಶ, ಬಾಲಿ, ಮಲೇಷ್ಯಾ, ಟ್ರಿನಿಡಾಡ್ ಹೀಗೆ ಹೊರ ದೇಶಗಳಲ್ಲಿರುವ ಹಿಂದೂಗಳು ದೀಪಾವಳಿ ಆಚರಿಸುತ್ತಾರೆ.
ಆದ್ರೆ ಭಾರತದಲ್ಲಿ ಕತ್ತಲನ್ನು ಸರಿಸಿ, ಬೆಳಕು ಮೂಡಿಸುವ ಮಹತ್ವದ ಹಬ್ಬವಾಗಿ ಆಚರಿಸುತ್ತಾರೆ. ಮನೆಯ ಮೂಲೆಮೂಲೆಗಳಲ್ಲಿ ಬೆಳಕಿನ ಐಶ್ವರ್ಯ ಸ್ವಾಗತಿಸುವ ಹಬ್ಬ. ಅಸತ್ಯದ ವಿರುದ್ಧ ಸತ್ಯದ ವಿಜಯದ ಹಬ್ಬವೆಂದು ಆಚರಿಸುತ್ತಾರೆ. ಇದನ್ನೂ ಓದಿ: ಬಿಜೆಪಿಯಿಂದ 8 ಶಾಸಕರು ಕಾಂಗ್ರೆಸ್ ಸೇರ್ತಾರೆ: ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಶಿವರಾಮ್ ಹೆಬ್ಬಾರ್ ಸಹಮತ
ದಸರೆ ದುರ್ಗೆಯ ಹಬ್ಬ. ಗಣೇಶ ಚತುರ್ಥಿ ಗಣೇಶನ ಹಬ್ಬ. ಗೋಕುಲಾಷ್ಟಮಿ ಶ್ರೀಕೃಷ್ಣನ ಹಬ್ಬ ಎನ್ನುವಂತೆ ದೀಪಾವಳಿ ಯಾವ ದೇವರ ಹಬ್ಬ? ಎಂಬ ಪ್ರಶ್ನೆಯೂ ಮೂಡುತ್ತದೆ. ಏಕೆಂದರೆ ಧನ್ವಂತ್ರಿ, ಕುಬೇರ, ಯಮ, ಲಕ್ಷ್ಮಿ ದೇವಿ, ಕಾಳಿ ಎಲ್ಲರ ಪೂಜೆಗಳೂ ಈ ಹಬ್ಬದಲ್ಲಿ ನಡೆಯುತ್ತವೆ. ಅದೇ ರೀತಿ ಉತ್ತರ ಭಾರತದಲ್ಲಿ ಶ್ರೀರಾಮನ ಕಥೆ ಕೂಡ ಸೇರಿಕೊಂಡಿದೆ. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ
ಶ್ರೀರಾಮ ರಾವಣನ ಸೈನ್ಯದ ವಿರುದ್ಧ ಯುದ್ಧದಲ್ಲಿ ವಿಜಯಿಯಾಗಿ ಅಯೋಧ್ಯೆಗೆ ಪ್ರವೇಶಿಸಿದ ದಿನಗಳನ್ನು ಉತ್ತರ ಭಾರತದಲ್ಲಿ ʻವಿಜಯ ದಶಮಿ’ ಎಂದು ಆಚರಿಸುತ್ತಾರೆ. ಈ ವಿಜಯದ ಇಪ್ಪತ್ತು ದಿನಗಳ ಬಳಿಕ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಪುಷ್ಪಕ ವಿಮಾನದಲ್ಲಿ ಕುಳಿತು ಅಯೋಧ್ಯೆಗೆ ಮರಳಿ ಬಂದಾಗ ಪ್ರಜಾಜನರು ಉತ್ಸವ ಆಚರಿಸಿದ್ದರು. ತಮ್ಮ ಮೆಚ್ಚಿನ ರಾಜಕುಮಾರನ ಸ್ವಾಗತಕ್ಕಾಗಿ ದಾರಿಯ ಇಕ್ಕೆಲಗಳಲ್ಲಿ ದೀಪಗಳನ್ನು ಹಚ್ಚಿದ್ದರು. ಶ್ರೀರಾಮನಿಗೆ ಆರತಿ ಎತ್ತುತ್ತಾ ಬೀದಿಗಳಲ್ಲಿ ನರ್ತಿಸಿದ್ದರು. ಈ ಉತ್ಸವದ ಆಚರಣೆಯೇ ದೀಪಾವಳಿ ಎನ್ನುತ್ತಾರೆ. ಆದರೆ ಈ ಕಥೆ ಹೇಳುವ ಉತ್ತರ ಭಾರತದಲ್ಲೆಲ್ಲೂ ದೀಪಾವಳಿಯ ದಿನ ಶ್ರೀರಾಮನ ಪೂಜೆ ನಡೆಯುವುದಿಲ್ಲ. ನಡೆಯುವುದು ಲಕ್ಷ್ಮೀದೇವಿಯ ಪೂಜೆ ಮಾತ್ರ.