ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾಂಕ ತ್ರಿಪಾಠಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾಂಕಾ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನ ಆರಂಭಿಸಿದಾಗ ಕೆಲವು ನಿರ್ದೇಶಕರು ತಮ್ಮ ಜೊತೆ ಸಮಯ ಕಳೆಯುವಂತೆ ಕೇಳಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
ಇಂತಹವರು ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತದೆ. ನನ್ನ ಬಳಿ ಹಣವೇ ಇಲ್ಲದ ಕಾಲವೊಂದಿತ್ತು. ಆದರೂ ನನ್ನ ಬಿಲ್‍ಗಳು, ಇಎಂಐಗಳನ್ನು ಇತ್ಯಾದಿಗಳನ್ನು ಪಾವತಿಸಬೇಕಾಗಿತ್ತು. ನನಗೆ ಸಾಕಷ್ಟು ಒತ್ತಡವಿತ್ತು. ಆಗ ನನಗೊಂದು ಬಿಗ್ ಆಫರ್ ಬಂತು. ನೀವು ಈ ನಿರ್ದೇಶಕರ ಜೊತೆ ಇದ್ದರೆ, ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದರು. ಆದರೆ ನಾನು ಯಾಕೆ ಇರಬೇಕು? ಎಂದು ಪ್ರಶ್ನಿಸಿಕೊಂಡೆ. ಇದರಿಂದ ನನ್ನ ಜೀವನ ಆಗುತ್ತದೆ ಎಂಬುವುದು ಸುಳ್ಳು, ಹಾಗೆ ನಾನು ಮಾಡಿದರೆ ನನ್ನ ಜೀವನವನ್ನು ಮಾರಾಟ ಮಾಡಿಕೊಂಡಂತೆ. ನಾನು ಯಾವಾಗಲೂ ತನ್ನ ಪ್ರತಿಭೆಯನ್ನು ನಂಬುತ್ತೇನೆ ಮತ್ತು ನನ್ನ ಸಾಮರ್ಥ್ಯದ ಆಧಾರದ ಮೇಲೆ ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತೇನೆ ಹೊರತು ನಿರ್ದೇಶಕನೊಂದಿಗೆ ಅಲ್ಲ ಎಂದು ಅರಿತುಕೊಂಡಿರುವುದಾಗಿ ತಿಳಿಸಿದ್ದಾರೆ.
ಮೀಟೂ ಚಳುವಳಿಯಿಂದ ಇಂತಹ ಆಫರ್ ನೀಡುವ ಜನರು ಮತ್ತು ಉದ್ಯಮದಲ್ಲಿರುವ ಪ್ರತಿಯೊಬ್ಬರಿಗೂ ಈ ಕುರಿತಂತೆ ಮನವರಿಕೆಯಾಯಿತು. ನೀವು ಈ ರೀತಿ ಇಂಡಸ್ಟ್ರಿಯಲ್ಲಿ ಮಾಡುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಏನು ಆಗುವುದಿಲ್ಲ. ಬದಲಾಗಿ ನೀವು ಅದನ್ನು ಮಾಡಿದರೆ, ಮುಂದೆ ಹೀಗೆ ಮಾಡದಿದ್ದರೆ ನಿಮ್ಮ ವೃತ್ತಿ ಜೀವನ ಹಾಳು ಮಾಡುತ್ತೇವೆ ಎಂಬ ಮಟ್ಟಕ್ಕೆ ಹೋಗುತ್ತಾರೆ ಎಂದಿದ್ದಾರೆ.
ಇದೆಲ್ಲಾ ನೋಡುತ್ತಿದ್ದರೆ ಆರಂಭದಲ್ಲಿ ನನಗೆ ಕಾಮಿಡಿಯಾಗಿ ಕಾಣಿಸುತ್ತಿತ್ತು. ನನಗೆ ನನ್ನ ಪ್ರತಿಭೆ ಆಧಾರದ ಮೇಲೆ ಮೊದಲ ಬಾರಿಗೆ ಕೆಲಸ ಸಿಕ್ಕಿತು. ಸದ್ಯ ಹಾಗೆಯೇ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video