ಬಿಗ್ ಬಾಸ್ ಮನೆ(Bigg Boss House) ಈಗ ಮುಂಚಿನಂತೆ ಇಲ್ಲ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಸೀಸನ್ 8ರಲ್ಲಿ ಮೋಡಿ ಮಾಡಿದ್ದ ದಿವ್ಯಾ ಉರುಡುಗ(Divya Uruduga) ಸೀಸನ್ 9ರಲ್ಲೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ದೊಡ್ಮನೆಯ ಆಟದ ಬಗ್ಗೆ ಅನುಭವವಿರುವ ದಿವ್ಯಾ ಇದೀಗ ರೂಪೇಶ್ ರಾಜಣ್ಣ(Roopesh Rajanna) ಮುಂದೆ ಡಲ್ ಆಗಿದ್ದಾರೆ. ರಾಜಣ್ಣ ಫೇಕ್ ಎಂದಿದ್ದಕ್ಕೆ ದಿವ್ಯಾ ಕಣ್ಣೀರಿಟ್ಟಿದ್ದಾರೆ.
ದೊಡ್ಮನೆಯ ಆಟ ಈಗ ಆರು ವಾರಗಳನ್ನ ಪೂರೈಸಿ, 7ನೇ ವಾರದತ್ತ ಕಾಲಿಟ್ಟಿದೆ. ಬಿಗ್ ಬಾಸ್ ಹೊಸ ಟಾಸ್ಕ್ವೊಂದನ್ನ ಕೊಟ್ಟಿದ್ದು, ಈ ಆಟದಲ್ಲಿ ಯಾರು ರಿಯಲ್ ಯಾರು ಫೇಕ್ ಎಂಬ ಪ್ರಶ್ನೆ ಸದಾ ಎದುರಾಗುತ್ತಲೇ ಇರುತ್ತದೆ. ಈ ವಿಚಾರವಾಗಿ ದೊಡ್ಮನೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ದಿವ್ಯಾ ಉರುಡುಗ ಫೇಕ್ ಎಂದು ರೂಪೇಶ್ ರಾಜಣ್ಣ ಅವರು ನೇರವಾಗಿ ಹೇಳಿದ್ದಾರೆ. ರಾಜಣ್ಣ ಮಾತಿಗೆ ದಿವ್ಯಾ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ
ರೂಪೇಶ್ ರಾಜಣ್ಣ ಹೇಳಿದ ಮಾತಿನಿಂದ ದಿವ್ಯಾ ಅವರಿಗೆ ನೋವಾಗಿದೆ. ಅವರು ಬಳಸಿದ ಭಾಷೆ ಕೂಡ ದಿವ್ಯಾಗೆ ಹಿಡಿಸಿಲ್ಲ. ಇದರಿಂದ ಅವರು ಗಳಗಳನೆ ಅತ್ತಿದ್ದಾರೆ. ರೂಪೇಶ್ ಮಾಡಿದ ಆರೋಪಗಳನ್ನು ದಿವ್ಯಾ ಸೈಲೆಂಟ್ ಆಗಿದ್ದಾರೆ. ಜೋರಾಗಿ ಅಳುತ್ತಿದ್ದ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.
ದಿವ್ಯಾ ಉರುಡುಗ ಅವರು ಫೇಕ್ ವ್ಯಕ್ತಿ, ನಾವಿಬ್ಬರು ಸೇರಿ ಒಂದು ಹಾಡು ಮಾಡಿದ್ವಿ. ಈ ಸಾಂಗ್ ರಾಜಣ್ಣ ಮಾಡಿದ್ದು ಅಂತಾ ಒಮ್ಮೆಯೂ ದಿವ್ಯಾ ಬಾಯಿ ಬಿಟ್ಟು ಹೇಳಲಿಲ್ಲ. ಇದನ್ನು ತಾವೇ ಮಾಡಿದ್ದು ಅಂತ ಬಿಂಬಿಸಲು ದಿವ್ಯಾ ಪ್ರಯತ್ನಪಡುತ್ತಾರೆ. ತಮ್ಮ ತಪ್ಪು ಮುಚ್ಕೊಂಡು ನಾಟಕ ಆಡ್ತಾರೆ ಎಂದು ದಿವ್ಯಾ ವಿರುದ್ಧ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಮನಸ್ಸಿನಲ್ಲಿ ಇಷ್ಟೆಲ್ಲ ಇಟ್ಟುಕೊಂಡು ನನ್ನ ಜೊತೆ ನಗುನಗುತ್ತಾ ಇರುವ ಅವರು ಫೇಕಾ ಅಥವಾ ನಾನು ಫೇಕಾ ಅಂತ ದಿವ್ಯಾ ಉರುಡುಗ ಫುಲ್ ರಾಂಗ್ ಆಗಿದ್ದಾರೆ.