ಮುಂಬೈ: ಟ್ರಾಫಿಕ್ ಸಮಸ್ಯೆಯಿಂದ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಹರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್(Amruta fadnavis) ಹೇಳಿದ್ದಾರೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ, ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೇನೆ. ಟ್ರಾಫಿಕ್ ಕಾರಣ, ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್ ಸಮಸ್ಯೆಯಿಂದ ನಡೆಯುತ್ತಿವೆ ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ
Advertisement
#WATCH: BJP leader Devendra Fadnavis’ wife Amruta Fadnavis says, “I’m saying this as common citizen. Once I go out I see several issues incl potholes,traffic. Due to traffic,people are unable to give time to their families & 3% divorces in Mumbai are happening due to it.” (04.02) pic.twitter.com/p5Nne5gaV5
— ANI (@ANI) February 5, 2022
Advertisement
ಮುಂಬೈನಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಕುಟುಂಬಸ್ಥರು ಪರಸ್ಪರ ಸಮಯ ಕೊಡಲಾಗುತ್ತಿಲ್ಲ. ಜನಜೀವನದ ಮೇಲೆ ಟ್ರಾಫಿಕ್ ಸಮಸ್ಯೆ ಭಾರಿ ಪರಿಣಾಮ ಬೀರಿದೆ ಎಂದರು. ದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್ನಲ್ಲಿ ಕೇಂದ್ರ ಸ್ಪಷ್ಟನೆ