ಮಳೆ ಅವಾಂತರದ ನಂತರ ಮತ್ತೆ ‘ಕಾಂತಾರ ಚಾಪ್ಟರ್ 1’ (Kantara 1) ಚಿತ್ರೀಕರಣವನ್ನು ರಿಷಬ್ ಶೆಟ್ಟಿ (Rishab shetty) ಶುರು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್‌ಗೆ ಮತ್ತೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್
‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ‘ಕಾಂತಾರ ಚಾಪ್ಟರ್ 1’ ಕೂಡ ಉತ್ತಮ ಕಥೆಯೊಂದಿಗೆ ಅದ್ಧೂರಿಯಾಗಿ ತರಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಮಳೆಯ ಅವಾಂತರದಿಂದ ‘ಕಾಂತಾರ 1’ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಿದ್ದರು. ಮಳೆ ಕಮ್ಮಿಯಾದ ಹಿನ್ನೆಲೆ ಮತ್ತೆ ಶೂಟಿಂಗ್ ಭರದಿಂದ ನಡೆಯುತ್ತಿದೆ.
ಅಂದಹಾಗೆ, ‘ಕಾಂತಾರ ಚಾಪ್ಟರ್ 1’ ಸಿನಿಮಾದ ರಿಷಬ್ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಭಿನ್ನ ಅವತಾರದಲ್ಲಿ ರಿಷಬ್ ಮಿಂಚಿದ್ದರು. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
ರಿಷಬ್ ನಟಿಸಿ, ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ (Hombale Films) ಬಂಡವಾಳ ಹೂಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.