ರಾಯಲ್ ಎನ್‍ಫೀಲ್ಡ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ – ಮೂವರು ಅರೆಸ್ಟ್

Public TV
Public TV - Digital Head
1 Min Read

– ಬಂಧಿತರಿಂದ 33 ಲಕ್ಷ ರೂ. ಮೌಲ್ಯದ ಬೈಕ್, ಮೊಬೈಲ್ ಜಪ್ತಿ

ಕೋಲಾರ: ಗಲ್ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 3 ಜನ ಬೈಕ್ ಹಾಗೂ ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ. ಮೌಲ್ಯದ 30 ಬೈಕ್‍ಗಳು (Bike) ಹಾಗೂ 3 ಲಕ್ಷ ರೂ. ಮೌಲ್ಯದ 50 ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಬಂಧಿತರನ್ನು ನಗರದ ಕಾರಂಜಿಕಟ್ಟೆ ಬಡಾವಣೆಯ ಸಂಜಯ್ ಮತ್ತು ಸೈಯದ್ ಇಮ್ರಾನ್ ಹಾಗೂ ಕುಂಬಾರಪೇಟೆ ನಿವಾಸಿ ನಂದಿ ಎಂದು ಗುರುತಿಸಲಾಗಿದೆ. ಆರೋಪಿಗಳು ಹೆಚ್ಚಾಗಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದರ ಜೊತೆ ಫ್ಯಾನ್ಸಿ ಬೈಕ್‍ಗಳನ್ನು ಕದಿಯುತ್ತಿದ್ದರು. ಬಳಿಕ ಕದ್ದ ಬೈಕ್‍ಗಳ ಬಿಡಿ ಭಾಗಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

ಕೋಲಾರ (Kolar) ಹಾಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ. ಅಲ್ಲದೇ ಆರೋಪಿಗಳ ವಿರುದ್ಧ 10 ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆಯಲಾದ ಬೈಕ್ ಹಾಗೂ ಮೊಬೈಲ್ ಮಾಲೀಕರಲ್ಲಿ ಕೆಲವರು ದೂರು ನೀಡಿಲ್ಲ. ಈ ಕಾರಣದಿಂದಾಗಿ ನ್ಯಾಯಾಲಯದ ಮೂಲಕ ಬೈಕ್ ಹಾಗೂ ಮೊಬೈಲ್‍ಗಳನ್ನು ಮಾಲೀಕರಿಗೆ ವಿತರಿಸಲಾಗುವುದು. ಬೈಕ್‍ಗಳನ್ನು ನಿಲ್ಲಿಸುವಾಗ ಆದಷ್ಟು ಸಿಸಿ ಕ್ಯಾಮೆರಾಗಳು ಇರುವ ಕಡೆ ನಿಲ್ಲಿಸುವಂತೆ ಎಸ್ಪಿ ನಾರಾಯಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ಸಾವು

Web Stories

Share This Article
Actress Jyothi Rai New Photo Shoot ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌!