ಮಂಗಳೂರು: ಅಪರೂಪದ ಪ್ರವಾಹಕ್ಕೆ ಮಂಗಳೂರು ಮುಳುಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರೋ ದಕ್ಷಿಣ ಕನ್ನಡ ಜಿಲ್ಲಾಡಳಿತ ಚರಂಡಿ ಒತ್ತುವರಿ ತೆರವಿಗೆ ನಿರ್ಧರಿಸಿದೆ.
Advertisement
ಚರಂಡಿ, ಕಾಲುವೆ ಒತ್ತುವರಿ ಬಗ್ಗೆ ಮೂರು ದಿನದಲ್ಲಿ ವರದಿ ಕೊಡುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಕಡಲ ನಗರಿಯಲ್ಲಿ ದಾಖಲೆ ಮಳೆಯಾಗಿದ್ರೂ ಪ್ರವಾಹದಿಂದ ಮುಳುಗಿದ್ದ ಎಲ್ಲರನ್ನೂ ನಿಬ್ಬೇರಿಸಿತ್ತು. ಪ್ರವಾಹೋತ್ತರ ಭೇಟಿ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಮೊದ್ಲು ಚರಂಡಿ ಸರಿ ಮಾಡಿಸಿ ಅಂತ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದರು.
Advertisement
Advertisement
ಅತ್ತಾವರ, ಅಳಕೆ, ಕುದ್ರೋಳಿ, ಕೊಟ್ಟಾರ, ಜೆಪ್ಪಿನಮೊಗರು, ಬಿಜೈ, ಆನೆಗುಂಡಿಯಲ್ಲಿ ರಸ್ತೆ, ಮನೆಗಳು ಜಲಾವೃತಗೊಂಡಿತ್ತು. ಮುಂಗಾರು ಆರಂಭ ಹೊತ್ತಲ್ಲೇ ಮತ್ತೊಮ್ಮೆ ಪ್ರವಾಹ ಆಗೋದನ್ನು ತಪ್ಪಿಸಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ನಿರ್ಧರಿಸಿದ್ದು ವಿಶೇಷವಾಗಿದೆ.