ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಹಾವೇರಿ (Haveri) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿ ಮೂವರು ಭಾಜರಾಗಿದ್ದಾರೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗುತ್ತದೆ. ಶನಿವಾರ 2024ನೇ ಸಾಲಿನ ಸಿಎಂ ಪದಕ ವಿಜೇತರ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು 2024 ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ಜೊತೆಗೆ ಶಿಗ್ಗಾಂವಿ ಪೊಲೀಸ್ ಠಾಣೆಯ ಹೆಚ್.ತಿಪ್ಪೆಸ್ವಾಮಿ, ಸ್ಪೆಷಲ್ ಆರ್‌ಹೆಚ್‌ಸಿ:66, 10ನೇ ಪಡೆ, ಕೆಎಸ್‌ಆರ್‌ಪಿ, ಬಟಾಲಿಯನ್‌ನ ಸಿಬ್ಬಂದಿ ಹಾಗೂ ಸವಣೂರು ಪೊಲೀಸ್ ಠಾಣೆಯ ಬಸವರಾಜ.ಡಿ.ಮಲ್ಲೂರ್, ಸಿಹೆಚ್‌ಸಿ:783 ಸಿಬ್ಬಂದಿಗೂ ಸಿಎಂ ಮೆಡಲ್ ಲಭಿಸಿದೆ. ಇದನ್ನೂ ಓದಿ: ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ – ಸ್ಮೃತಿ ಮಂದಿರಕ್ಕೆ ಭೇಟಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿ ಪದಕ ಲಭಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪತ್ರ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು – ಸಿಸಿಟಿವಿ, ಸರಿಯಾದ ಸೆಕ್ಯೂರಿಟಿ ಇಲ್ಲ