– ಪಿಡಿಓ ಕಾರ್ಯದರ್ಶಿ ಸೇರಿ 34 ಮಂದಿ ಸಸ್ಪೆಂಡ್
ಯಾದಗಿರಿ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಎರಡು ವರ್ಷಗಳಿಂದ 57 ಜನ ನೌಕರರ ವಿರುದ್ಧ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿಲ್ಪಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
Advertisement
ಈ ಕುರಿತು ಶಿಲ್ಪಾ ಶರ್ಮಾ ಅವರು ಪ್ರಕಟಣೆ ಹೊರಡಿಸಿದ್ದು, 57 ಸಿಬ್ಬಂದಿ ಪೈಕಿ, 34 ಮಂದಿಯನ್ನು ಅಮಾನತು ಮಾಡಲಾಗಿದೆ. ನಾಲ್ವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ
Advertisement
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು 16, ಗ್ರಾಮ ಪಂಚಾಯತ್ ಕಾರ್ಯದರ್ಶಿ-4(ಗ್ರೇಡ್-1), ಗ್ರಾಮ ಪಂಚಾಯತ್ ಕಾರ್ಯದರ್ಶಿ-6(ಗ್ರೇಡ್-2), ದ್ವಿತೀಯ ದರ್ಜೆ ಲೆಕ್ಕ ಸಹಾಯಕರ-1, ಕ್ಲಾರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್-1, ಕರವಸೂಲಿಗಾರ-1 ಒಳಗೊಂಡು ಒಟ್ಟು 29 ಮಂದಿಯನ್ನು ಕಳೆದ ಎರಡು ವರ್ಷಗಳಲ್ಲಿ ಅಮಾನತ್ತುಗೊಳಿಸಲಾಗಿದೆ.
Advertisement
Advertisement
ದ್ವಿತೀಯ ದರ್ಜೆ ಸಹಾಯಕ-1, ಕಿರಿಯ ಇಂಜಿನಿಯರ್-3, ಪ್ರಥಮ ದರ್ಜೆ ಸಹಾಯಕ-1 ಒಟ್ಟು-05 ಸೇರಿ ಒಟ್ಟು 34 ಮಂದಿ ಅಮಾನತ್ತುಗೊಳಿಸಲಾಗಿದೆ.
ದಂಡನೆ ವಿಧಿಸಿದ ಸಿಬ್ಬಂದಿಗಳ ಪ್ರಕರಣ: ಕಿರಿಯ ಇಂಜಿನಿಯರ್-3, ಕಾರ್ಯನಿರ್ವಾಹಕ ಅಧಿಕಾರಿಗಳು-2, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು-6 ಒಟ್ಟು-11 ಸಿಬ್ಬಂದಿಗೆ ದಂಡನೆ ವಿಧಿಸಲಾಗಿದೆ ಎಂದು ಶರ್ಮಾ ಅವರ ಪ್ರಕಟನೆಯ ಮೂಲಕ ತಿಳಿದುಬಂದಿದೆ. ಇದನ್ನೂ ಓದಿ: ರೇಪ್ ಎಂಜಾಯ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ – ರಮೇಶ್ ಪ್ರತಿಕೃತಿಗೆ ಪೊರಕೆ ಸೇವೆ