ಬೆಂಗಳೂರು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಜಂಜಾಟ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ಈಗ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಟೆನ್ಷನ್. ನೂತನ ಸಚಿವರ ಚಿತ್ತವೂ ಈಗ ಜಿಲ್ಲಾ ಉಸ್ತುವಾರಿ ಹುದ್ದೆಗಳ ಮೇಲೆ ಬಿದ್ದಿದೆ. ತಮ್ಮ ಜಿಲ್ಲೆಗೇ ಉಸ್ತುವಾರಿ ಸಚಿವರಾಗಲು ಮಿತ್ರಮಂಡಳಿ ಕಸರತ್ತು ಆರಂಭಿಸಿದ್ದಾರೆ.
Advertisement
ಆದರೆ ಸಿಎಂ ಪ್ಲಾನೇ ಬೇರೆ ಇದೆ. ಜಿಲ್ಲಾ ಉಸ್ತುವಾರಿಗಳ ಮೂಲಕ ಮುಂದಿನ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗರು ಹೆಚ್ಚಿರುವ ಜೆಡಿಎಸ್ ಭದ್ರಕೋಟೆ ಕ್ಷೇತ್ರಗಳ ಮೇಲೆಯೇ ಸಿಎಂಗೆ ಕಣ್ಣು ಬಿದ್ದಿದೆ. ಒಕ್ಕಲಿಗರ ಮತದಾರರು ಇರುವ ಜೆಡಿಎಸ್ ಕೋಟೆಗಳಿಗೆ ಒಕ್ಕಲಿಗ ಸಚಿವರನ್ನೇ ಹಾಕಲು ಸಿಎಂ ಮುಂದಾಲೋಚನೆ ಮಾಡಿದ್ದಾರೆ. ಮುಂದಿನ ಚುನಾವಣೆವರೆಗೆ ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿಎಂ ತಂತ್ರ ಕುತೂಹಲ ಹುಟ್ಟಿಸಿದೆ.
Advertisement
Advertisement
ಜೆಡಿಎಸ್ ಭದ್ರ ಕೋಟೆಗಳಾದ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹಾಗಾಗಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರನ್ನೇ ಉಸ್ತುವಾರಿ ಸಚಿವ ಮಾಡಲು ಸಿಎಂ ಮುಂದಾಗಿದ್ದಾರೆ. ಸದ್ಯಕ್ಕೆ ಸಿಎಂ ಅವರ ಈ ಜಾತಿ ಲೆಕ್ಕಾಚಾರದ ಪ್ಲಾನ್ ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗೆ ಅನ್ವಯಿಸಲಿದೆ. ಬೆಳಗಾವಿ ಉಸ್ತುವಾರಿ ಆಗಲು ಸಾಕಷ್ಟು ಪೈಪೋಟಿ ಇದ್ದು, ಅದನ್ನು ಬೇರೆ ರೀತಿಯಲ್ಲಿ ಡೀಲ್ ಮಾಡಲು ಸಿಎಂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರು
ಹಾಸನ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್ ಅಥವಾ ಎಸ್.ಟಿ.ಸೋಮಶೇಖರ್
ರಾಮನಗರ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್
ಮಂಡ್ಯ- ನಾರಾಯಣ ಗೌಡ
ರಾಯಚೂರು- ಎಸ್.ಟಿ.ಸೋಮಶೇಖರ್
ಬಳ್ಳಾರಿ- ಆನಂದ್ ಸಿಂಗ್
ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
ಮಡಿಕೇರಿ- ಕೆ.ಗೋಪಾಲಯ್ಯ
ದಾವಣಗೆರೆ- ಬಿ.ಸಿ.ಪಾಟೀಲ್
ಯಾದಗಿರಿ- ಶ್ರೀಮಂತ ಪಾಟೀಲ್
ಕೊಪ್ಪಳ- ಬೈರತಿ ಬಸವರಾಜು