ಬೆಂಗಳೂರು: ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆದಿದೆ. ನಿರೀಕ್ಷಿಸಿದ ಖಾತೆಗಳನ್ನು ನೀಡಲಿಲ್ಲ, ಕೊನೆ ಪಕ್ಷ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಸಿಎಂ ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರು ತಮ್ಮ ಜಿಲ್ಲೆಯ ಉಸ್ತುವಾರಿ ಕೇಳಿದ್ರೆ, ಬಿಜೆಪಿ ಮಾತ್ರ ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಸಂಭವನೀಯ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಯಾರು ಯಾವ ಜಿಲ್ಲೆಯ ಉಸ್ತುವಾರಿ ಕೇಳಿದ್ದಾರೆ ಮತ್ತು ಯಾವ ಜಿಲ್ಲೆಗೆ ಯಾರಿಗೆ ನೀಡಿದ್ರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದರ ಕುರಿತಾಗಿ ಸಿಎಂ ಆಪ್ತರೊಂದಿಗೆ ಚರ್ಚಿಸುತ್ತಿದ್ದಾರೆ.
Advertisement
Advertisement
ಜಿಲ್ಲಾವಾರು ಸಮುದಾಯಗಳ ಬಲಾಬಲವೇ ಉಸ್ತುವಾರಿಗಳ ನೇಮಕಕ್ಕೆ ಮಾನದಂಡ ಎಂದು ನಿಗದಿಪಡಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಯಾವ ಸಮುದಾಯ ಹೆಚ್ಚಿದೆಯೋ ಅಲ್ಲಿಗೆ ಅದೇ ಸಮುದಾಯದ ಸಚಿವ ಉಸ್ತುವಾರಿಯಾಗಿ ನೇಮಕವಾಗಬೇಕು. ಜೆಡಿಎಸ್ ಪ್ರಾಬಲ್ಯ ಇರೋ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರ ನೇಮಕ, ಲಿಂಗಾಯತ ಸಮುದಾಯ ಪ್ರಾಬಲ್ಯದ ಕಡೆ ಲಿಂಗಾಯತ ಸಚಿವರೇ ಉಸ್ತುವಾರಿ ನೇಮಕ ಪಕ್ಕಾ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.
Advertisement
ಸಂಭವನೀಯ ಜಿಲ್ಲಾ ಉಸ್ತುವಾರಿಗಳ ಪಟ್ಟಿ:
Advertisement
1. ಆರ್ ಅಶೋಕ್ – ಮಂಡ್ಯ, ರಾಮನಗರ
2. ವಿ.ಸೋಮಣ್ಣ – ಮೈಸೂರು, ಚಾಮರಾಜನಗರ
3. ಡಾ.ಅಶ್ವಥ್ ನಾರಾಯಣ – ಬೆಂಗಳೂರು, ಚಿಕ್ಕಬಳ್ಳಾಪುರ
4. ಸುರೇಶ್ ಕುಮಾರ್ – ಕೊಡಗು
5. ಸಿ.ಟಿ.ರವಿ – ಚಿಕ್ಕಮಗಳೂರು, ಹಾಸನ
6. ಲಕ್ಷ್ಮಣ ಸವದಿ – ಬೆಳಗಾವಿ
7. ಗೋವಿಂದ ಕಾರಜೊಳ – ಬಾಗಲಕೋಟೆ, ವಿಜಯಪುರ
8. ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ
9. ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣ ಕನ್ನಡ, ಉಡುಪಿ
10. ಶ್ರೀರಾಮುಲು – ಬಳ್ಳಾರಿ, ಚಿತ್ರದುರ್ಗ
11. ಬಸವರಾಜ ಬೊಮ್ಮಾಯಿ – ಹಾವೇರಿ, ದಾವಣಗೆರೆ
12. ಕೆ. ಎಸ್. ಈಶ್ವರಪ್ಪ – ಕೊಪ್ಪಳ, ಶಿವಮೊಗ್ಗ
13. ಪ್ರಭು ಚೌಹಾಣ್ – ಬೀದರ್
14. ಎಚ್. ನಾಗೇಶ್ – ಕೋಲಾರ
15. ಜೆ .ಸಿ ಮಾಧುಸ್ವಾಮಿ – ತುಮಕೂರು, ಕಲಬುರ್ಗಿ
16. ಸಿ. ಸಿ. ಪಾಟೀಲ್ – ಗದಗ, ರಾಯಚೂರು
17. ಶಶಿಕಲಾ ಜೊಲ್ಲೆ – ಯಾದಗಿರಿ