ಚಿಕ್ಕಬಳ್ಳಾಪುರ: ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯಗಳೇ ಕುಡುಕುರ ಪಾಲಿನ ಬಾರ್‍ಗಳಾಗಿದ್ದು, ಶೌಚಾಲಯಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಪಾಕೆಟ್‍ಗಳು ಕಾಣಿಸುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದು ಆರೋಗ್ಯ ಸಚಿವರ ಜಿಲ್ಲೆಯ ಪಕ್ಕದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರೋ ಘಟನೆ.
ಚಿಕ್ಕಬಳ್ಳಾಪುರದ ಆಸ್ಪತ್ರೆಯ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪಾಕೆಟ್ ಗಳು ಸಿಗುತ್ತಿವೆ. ಆರೋಗ್ಯ ಭಾಗ್ಯ ಕರುಣಿಸುವ ಆಸ್ಪತ್ರೆಯಲ್ಲೇ ಕದ್ದು ಮುಚ್ಚಿ ಮದ್ಯ ಸೇವನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
Advertisement
ಆಸ್ಪತ್ರೆಯ ಶೌಚಾಲಯಗಳಲ್ಲಿನ ಕಿಟಕಿ, ಪಾರ್ಕಿಂಗ್ ಪ್ಲಾಟ್ ಸೇರಿದಂತೆ ಆಸ್ಪತ್ರೆಯ ನಿರ್ಜನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್ ಗಳು ಕಣ್ಣಿಗೆ ರಾಚುತ್ತಿದ್ದು, ಜಿಲ್ಲಾಸ್ಪತ್ರೆ ಕುಡುಕರ ಪಾಲಿನ ಸ್ವರ್ಗ ಎಂಬಂತಾಗಿದೆ. ಇದರಿಂದ ರೋಗಿಗಳು ಶೌಚಾಲಯಕ್ಕೆ ಹೋಗಲು, ಆಸ್ಪತ್ರೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ಕುಡುಕ ಮಹಾಶಯರು ಆಸ್ಪತ್ರೆಯನ್ನೇ ಬಾರ್‍ಗಳಾಗಿ ಮಾಡಿದ್ದಾರೆ.
Advertisement
ಅಧಿಕಾರಿಗಳು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement