ಮಡಿಕೇರಿ: ಹೆಣ್ಣುಮಗಳೊಬ್ಬಳು ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯ ಮಾಡುವ ಮೂಲಕ ಇಡೀ ಜಿಲ್ಲೆಯನ್ನು ಕಂಟ್ರೋಲ್ ಗೆ ತೆಗೆದುಕೊಂಡು ಹೆಣ್ಮಕ್ಕಳಿಗೆ ಮಾದರಿಯಾಗಿದ್ದಾರೆ.
ಕೇರಳ ಮೂಲದ ಪಿ.ಐ ಶ್ರೀವಿದ್ಯಾ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಡಕ್ ಕೆಲಸ ಹಾಗೂ ಮೃದು ಮಾತಿನಿಂದಲೇ ಜಿಲ್ಲೆಯಲ್ಲಿ ಜನಮನ್ನಣೆ ಗಳಿಸಿರೋ ಈ ಇವರಿಗೆ ಬಡವರು, ರೈತರಿಗೆ ಸಹಾಯ ಮಾಡೋದರಲ್ಲಿ ತುಂಬಾ ಸಂತಸ ಸಿಗುತ್ತಂತೆ.
Advertisement
Advertisement
ಸಹಾಯ ಮಾಡಿದ ಬಳಿಕ ಅವರು ಕರೆ ಮಾಡಿ ಧನ್ಯವಾದ ಹೇಳೋದಕ್ಕಿಂತ ದೊಡ್ಡ ಸಂತೋಷ ಮತ್ತೊಂದು ಇಲ್ಲ ಎಂದು ವಿದ್ಯಾ ಹೇಳ್ತಾರೆ. ಇನ್ನು ಜಿಲ್ಲಾಧಿಕಾರಿ ಡ್ಯೂಟಿ ಜೊತೆಗೆ ಕುಟುಂಬ ನಿರ್ವಹಣೆ ಹೇಗೆ ಮಾಡಿಡುತ್ತೀರ ಎಂಬ ಪ್ರಶ್ನೆಗೆ, ಹಾಗೇನೂ ವ್ಯತ್ಯಾಸ ಕಾಣಿಸುತ್ತಿಲ್ಲ ನಂಗೆ. ಎಲ್ಲವನ್ನೂ ಸರಳವಾಗಿಯೇ ಹ್ಯಾಂಡಲ್ ಮಾಡುತ್ತೀನಿ. ನಾನು ಸ್ವತಂತ್ರವಾಗಿ ದುಡೀತಿದ್ದೀನಿ ಎನ್ನುವ ಆತ್ಮತೃಪ್ತಿ ನನಗಿದೆ ಎಂದು ಉತ್ತರಿಸಿದ್ದಾರೆ.
Advertisement
ಎಲ್ಲಾ ಹೆಣ್ಮಕ್ಕಳೂ ಕೂಡಾ ತಮ್ಮ ಸ್ವಂತ ದುಡಿಮೆಯ ಬಗ್ಗೆ ಯೋಜನೆ ಮಾಡಬೇಕು. ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾ ಸಲಹೆ ನೀಡಿದ್ದಾರೆ.