– ಸಾಮಾಜಿಕ ಜಾಲಾತಣದಲ್ಲಿ ಭಾರೀ ಮೆಚ್ಚುಗೆ
ಹೈದರಾಬಾದ್: ಕಲೆಕ್ಟರ್ ಒಬ್ಬರು ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿವೆ.
ನಿಜಾಮಾಬಾದ್ ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ 3 ದಿನಗಳ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಸಾಮಾನ್ಯ ಉಡುಪಿನಲ್ಲಿದ್ದ ಅವರು ತಲೆಗೆ ಬಿಳಿ ಟೋಪಿ ಹಾಕಿಕೊಂಡು, ಸೈಕಲ್‍ನಲ್ಲಿ ಬೆಳಗ್ಗೆ 8 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಬಳಿಕ ಹೊರ ರೋಗಿಗಳ ವಿಭಾಗ (ಒಪಿಡಿ) ಸೇರಿದಂತೆ ಹಲವಾರು ವಾರ್ಡ್‍ಗಳ ರೋಗಿಗಳ ಸಮಸ್ಯೆಯನ್ನು ನಾರಾಯಣ್ ರೆಡ್ಡಿ ಆಲಿಸಿದರು.
Advertisement
Advertisement
ಆರ್‍ಒ ವಾಟರ್ ಪ್ಲಾಂಟ್‍ಗಳು ಹಾಗೂ ಔಷಧಿ ಅಂಗಡಿಗಳಲ್ಲಿ ಇರುವ ಔಷಧಿಗಳ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಆಸ್ಪತ್ರೆಗೆ ತಲುಪಿದ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ, ಆಸ್ಪತ್ರೆಯ ಅಧೀಕ್ಷಕ ಡಾ.ರಾಮುಲು ಕೂಡ ಸ್ಥಳಕ್ಕೆ ತಲುಪಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವ ನೌಕರರಿಗೆ ನೋಟಿಸ್ ನೀಡುವಂತೆ ಡಾ.ರಾಮುಲು ಅವರಿಗೆ ನಾರಾಯಣ್ ರೆಡ್ಡಿ ಸೂಚನೆ ನೀಡಿದರು.
Advertisement
ನಾರಾಯಣ್ ರೆಡ್ಡಿ ಅವರು ಡಿಸೆಂಬರ್ 24ರಂದು ಅಧಿಕಾರ ವಹಿಸಿಕೊಂಡರು. ಬಳಿಕ ಆಸ್ಪತ್ರೆಗೆ ತಲುಪುವ ಮೊದಲು ರಸ್ತೆ ಮತ್ತು ಕಟ್ಟಡ ಇಲಾಖೆಯ ಅತಿಥಿ ಗೃಹದ ಸ್ಥಿತಿಯನ್ನು ಗಮನಿಸಿದ್ದರು.
Advertisement
The @Collector_NZB Sri C.Narayana Reddy I.A.S carried out an unscheduled & sudden Inspection of Government General hospital, Nizamabad and Interacted with Patients and their attendants. pic.twitter.com/tpS40AmbQE
— District Collector Nizamabad (@Collector_NZB) December 27, 2019
ಈ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ 17 ನೇ ಸ್ಥಾನದಲ್ಲಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಆಸ್ಪತ್ರೆ ಇದಾಗಿದೆ. ಇಲ್ಲಿಗೆ ಪಕ್ಕದ ಎರಡು ಜಿಲ್ಲೆಯ ಜನರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ಇದನ್ನು ಗಮನಿಸಿದ ನಾರಾಯಣ್ ರೆಡ್ಡಿ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡುವಂತೆ ಆದೇಶಿಸಿದ್ದಾರೆ. ಕಲೆಕ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.