DistrictsKarnatakaKodaguLatestMain Post

ಕೊಡಗಿನಲ್ಲಿ 4 ದಿನದ ಬಳಿಕ ನಿಷೇಧಾಜ್ಞೆ ಹಿಂಪಡೆದ ಜಿಲ್ಲಾಡಳಿತ

ಮಡಿಕೇರಿ: ಕೊಡಗಿನಲ್ಲಿ 4 ದಿನಗಳಿಂದ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಶನಿವಾರ ಸಂಜೆ ಹಿಂಪಡೆದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್‌ನಿಂದ ಮಡಿಕೇರಿ ಚಲೋ ಮತ್ತು ಬಿಜೆಪಿಯಿಂದ ಜನ ಜಾಗೃತಿ ಸಮಾವೇಶ ಘೋಷಣೆಯಾಗಿತ್ತು. ಆದರೆ ಕೋಮು ಸೂಕ್ಷ್ಮ ಜಿಲ್ಲೆಯಾದ ಕೊಡಗಿನಲ್ಲಿ ಪರಿಸ್ಥಿತಿಯ ದುರ್ಲಾಭವನ್ನು ಹೊರಗಿನ ವ್ಯಕ್ತಿಗಳು ಪಡೆಯಲು ನಡೆಸಿರುವ ಹುನ್ನಾರ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆಗಸ್ಟ್ 24ರ ಬೆಳಗ್ಗೆ 6 ರಿಂದ ಇಂದು ಸಂಜೆ 6 ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಇದನ್ನೂ ಓದಿ: ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

4 ದಿನಗಳಿಂದ 144 ಸೆಕ್ಷನ್ ಇದ್ದರೂ ಜಿಲ್ಲೆಯ ಜನಜೀವನ ಎಂದಿನಂತೆಯೇ ನಡೆಯುತ್ತಿತ್ತು. ಗಾಡಿಭಾಗದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯೂ ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್ ಮಾಡಲಾಗಿತ್ತು. ಇದೀಗ ಸಂಜೆ 6 ಗಂಟೆಯ ಬಳಿಕ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಹಿಂದಕ್ಕೆ ಪಡೆದಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ 49ನೇ CJI ಆಗಿ ಯುಯು ಲಲಿತ್ ಪ್ರಮಾಣ ವಚನ ಸ್ವೀಕಾರ

Live Tv

Leave a Reply

Your email address will not be published.

Back to top button