ರಾಮನಗರ: ತಾಲೂಕು ಬಿಜೆಪಿಯಲ್ಲಿ (BJP) ಭಿನ್ನಮತ ಸ್ಫೋಟಗೊಂಡಿದ್ದು ಎಸ್‌ಸಿ (SC) ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ (Resignation) ಮುಂದಾಗಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರ ನಡೆಯಿಂದ ಬೇಸತ್ತು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ರಾಮನಗರದಲ್ಲಿ (Ramanagara) ಪಕ್ಷ ಸಂಘಟನೆಗೆ ಸ್ಥಳೀಯ ನಾಯಕರು ನಮಗೆ ಸಹಕಾರ ನೀಡುತ್ತಿಲ್ಲ, ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಆದರೆ ವಿಧಾನಸಭೆಯ ಅಭ್ಯರ್ಥಿ ನಾನೇ ಎಂದು ಸ್ವಯಂಘೋಷಿತ 3-4 ನಾಯಕರು ಹಿಂಬಾಲಕರೊಂದಿಗೆ ಒಡಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ವೈಗೇಕೆ ಗೊತ್ತಾಯ್ತು ಆ ಗುಟ್ಟು; ಸಿದ್ದು ಗುಟ್ಟಲ್ಲಿ ವಿಜಯೇಂದ್ರ ಭವಿಷ್ಯ?
ಇವರು ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ನೀಡುತ್ತಿಲ್ಲ. ಇಂತಹವರ ವಿರುದ್ಧ ವರಿಷ್ಠರೂ ಕ್ರಮ ಕೈಗೊಂಡಿಲ್ಲ. ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ಹೊರಟಿದ್ದ ನಿಷ್ಠಾವಂತ ಕಾರ್ಯಕರ್ತರಿಗೆ ಸಹಕಾರ ನೀಡದ ನಾಯಕರ ಧೋರಣೆಯಿಂದ ಬೇಸರವಾಗಿದೆ. ಹೀಗಾಗಿ ಎಸ್‌ಸಿ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದೇವೆ ಎಂದು ರಾಮನಗರ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೆಆರ್ ಗೋವಿಂದಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಭದ್ರಕೋಟೆಯಲ್ಲಿ ಅಮಿತ್ ಶಾ ಹವಾ- ರಮೇಶ್ ಜಾರಕಿಹೊಳಿ ಶಪಥ ನಡೆಯತ್ತಾ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k