ತುಮಕೂರು: ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರೀಡಾಪಟುಗಳು ಅಡ್ಡಿ ಮಾಡಿದ್ದು, ಈ ಪರಿಣಾಮ ಅವರ ಮೇಲೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಗರಂ ಆದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಶಾಲಾ ಕಟ್ಟಡ ಶಂಕುಸ್ಥಾಪನೆಗೆಂದು ಮಾಧುಸ್ವಾಮಿ ಅವರು ಆಗಮಿಸಿದ್ದು, ಈ ವೇಳೆ ಇಲ್ಲಿ ಶಾಲಾ ಕಟ್ಟಡ ಬೇಡ, ಬೇರೆ ಜಾಗದಲ್ಲಿ ನಿರ್ಮಿಸಿ ಎಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಬಹಿರಂಗ ಆಗಬೇಕು: ಜಿ.ಪರಮೇಶ್ವರ್
ಇಡೀ ಪಟ್ಟಣಕ್ಕೆ ಇದೊಂದೇ ದೊಡ್ಡ ಮೈದಾನ ಇರುವುದು. ಇಲ್ಲಿ ಕಟ್ಟಡ ನಿರ್ಮಿಸಿದರೆ ಇತರೆ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತೆ ಎಂದು ಕ್ರೀಡಾಪಟುಗಳು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಮಾಡುತ್ತಾ ಬಂದಿದ್ದ ಸ್ಥಳೀಯ ಕ್ರೀಡಾಪಟುಗಳು, ಶಂಕುಸ್ಥಾಪನೆಗೆ ಬಂದಿದ್ದ ಮಾಧುಸ್ವಾಮಿ ಅವರಿಗೂ ಅಡ್ಡಿ ಪಡಿಸಿದ್ದಾರೆ. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು
ಈ ವೇಳೆ ಸಿಟ್ಟಾದ ಸಚಿವ ಮಾಧುಸ್ವಾಮಿ, ಒಂದು ವರ್ಷದಿಂದಲೂ ಹೀಗೆ ಸಮಸ್ಯೆ ಮಾಡಿಕೊಂಡು ಬಂದಿದ್ದೀರಿ. ಇದು ಶಾಲಾ ಆವರಣ, ಮಕ್ಕಳಿಗೆಂದು ಇರುವುದು, ಮಕ್ಕಳ ಆಟದ ಮೈದಾನ ಇದು. ಶಾಲೆ ಉದ್ದೇಶಕ್ಕೆ ಬಳಕೆಯಾಗಬೇಕು ಎಂದು ಕ್ರೀಡಾಪಟುಗಳನ್ನು ತರಾಟೆಗೆ ತೆಗೆದುಕೊಂಡರು.