ಹಾವೇರಿ: ಹೈದರಾಬಾದಿನ ಪಶು ವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದ್ದು, ಪೊಲೀಸರ ಈ ಕೆಲಸಕ್ಕೆ ಹ್ಯಾಟ್ಸಫ್ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ತೋಟದ ಮನೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಶಹಬ್ಬಾಸ್ ಗಿರಿ ಕೊಡಬೇಕು. ಇಂತಹ ಕೃತ್ಯ ಎಸಗೋ ದುಷ್ಕರ್ಮಿಗಳಿಗೆ ಪಾಠ ಆಗಬೇಕು. ಉತ್ತರ ಕರ್ನಾಟಕ ಗಂಡು ಮೆಟ್ಟಿದ ನೆಲ. ಆರೋಪಿಗಳ ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಹ್ಯಾಟ್ಯಫ್ ಎಂದರು.
ಬಳಿಕ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಕೌರವ, ರಾಜೀನಾಮೆ ನೀಡಿ ಐದು ತಿಂಗಳಾಯ್ತು. ಸಾಕಷ್ಟು ನೋವು, ಟೀಕೆ ಅನುಭವಿಸಿದ್ದೇನೆ. ಕೆಟ್ಟ ಸರ್ಕಾರ ತೆಗೆದು ಒಳ್ಳೆಯ ಮುಖ್ಯಮಂತ್ರಿ ಮಾಡಿದ್ದೇವೆ ಅನ್ನೋ ಸಮಾಧಾನ ಇದೆ. 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ಅನರ್ಹತೆ ಹೋಗಿ ಅರ್ಹತೆ ಬರುತ್ತದೆ. ತಾಲೂಕಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ತಮ್ಮದೇ ಚುನಾವಣೆ ಅನ್ನೋ ರೀತಿ ಕಾರ್ಯಕರ್ತರು ಚುನಾವಣೆ ಮಾಡಿದರು. ಕಾರ್ಯಕರ್ತರು ಈಗಾಗಲೇ ವಿಜಯೋತ್ಸವದಲ್ಲಿದ್ದಾರೆ. ಚುನಾವಣೆಗೆ ಸಮಯ ಕಡಿಮೆ ಇತ್ತು. ಆದರೂ 20 ದಿನಗಳ ಓಡಾಡಿ ಚುನಾವಣೆ ಮಾಡಿ ಇವತ್ತು ನಿರಾಳ ಆಗಿದ್ದೇವೆ. ತೋಟಕ್ಕೆ ಬಂದು ತಂದೆ-ತಾಯಿ ಸಮಾಧಿಗೆ ನಮಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ