ದಿಶಾ ಪಟಾನಿ ಜಿಪ್ ಲೆಸ್ ಪ್ಯಾಂಟ್ : ನೆಟ್ಟಿಗರಿಂದ ನಟಿಗೆ ಮಂಗಳಾರತಿ

Public TV
1 Min Read
disha patani 4

ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಅವತಾರಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳ ಮೂಲಕ ಗುರುತಿಸಿಕೊಂಡ ಈ ನಟಿ ಯಾಕೆ ಹೀಗೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದಿಶಾ ಪಟಾನಿ ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಅವರು ಜಿಪ್ ಲೆಸ್ ಪ್ಯಾಂಟ್ (Zipless Pants) ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಕೂಡ ಆಗಿವೆ.

disha patani 3

ತೆಲುಗು ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ದಿಶಾ. ಆನಂತರ ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಪ್ರವೇಶ ಕೂಡ ಮಾಡಿದವರು. ಸಾರ್ವಕಾಲಿಕ ಸಿನಿಮಾ ಎನಿಸಿಕೊಂಡಿರುವ ಚೀನಾದ ಹಾಸ್ಯ ಕುಂಗ್ ಫೂ ಯೋಗ ಚಿತ್ರದಲ್ಲೂ ದಿಶಾ ಕಾಣಿಸಿಕೊಂಡಿದ್ದಾರೆ. ಭಾರತ್, ಬಾಘಿ ಹೀಗೆ ಯಶಸ್ಸಿ ಸಿನಿಮಾಗಳಲ್ಲಿ ನಟಿಸಿದ ನಟಿ, ಈಗ ಯಾಕೆ ಹೀಗೆ? ಎನ್ನುವ ಪ್ರಶ್ನೆ ಅಭಿಮಾನಿಗಳದ್ದು. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

disha patani 2

ದಿಶಾ ನಟನೆಗಿಂತಲೂ ಹೆಚ್ಚಾಗಿ ಸಖತ್ ಸುದ್ದಿ ಮಾಡಿದ್ದು ಅವರ ಬೋಲ್ಡ್ ಫೋಟೋಗಳು ಮೂಲಕ. ಸತತವಾಗಿ ಈ ರೀತಿಯ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣವನ್ನು ಅವರು ಈವರೆಗೂ ಬಿಟ್ಟು ಕೊಟ್ಟಿಲ್ಲ. ಈ ರೀತಿಯ ಫೋಟೋಗಳನ್ನು ಹಾಕಿದಾಗೆಲ್ಲ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಇದೇ ಕಾರಣವಾ ಎನ್ನುತ್ತಿದ್ದಾರೆ ಅಭಿಮಾನಿಗಳು.

disha patani 1

ಸಿನಿಮಾಗಳ ಜೊತೆಗೆ ಅವರ ಡೇಟಿಂಗ್ ಮತ್ತು ಅಫೇರ್ ವಿಚಾರಗಳು ಕೂಡ ಹಲವಾರು ಬಾರಿ ಮುನ್ನೆಲೆಗೆ ಬಂದಿವೆ. ಮೊದ ಮೊದಲು ಟೈಗರ್ ಶ್ರಾಫ್ ಜೊತೆ ದಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಡೀ ಬಿ ಟೌನ್ ಈ ವಿಚಾರ ಮಾತನಾಡುತ್ತಿತ್ತು. ನಂತರದ ದಿನಗಳಲ್ಲಿ ದಿಶಾ ಜೊತೆ ಕಾಣಿಸಿಕೊಂಡಿರುವ ಮತ್ತೊಂದು ಹೆಸರು ಅಲೆಕ್ಸಾಂಡರ್ ಅಲೆಕ್ಸ್ ಎನ್ನುವವರದ್ದು. ಸದ್ಯ ಅವರ ಜೊತೆ ದಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಚಾರಗಳನ್ನು ಅವರ ಜಿಪ್ ಲೆಸ್ ಪ್ಯಾಂಟ್ ಅಳಿಸಿ ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *