ಮುಂಬೈ: ಬಾಲಿವುಡ್ ನಟಿ ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಂ. ಎಸ್ ಧೋನಿ ದ ಅನ್‍ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಕ್ವೀನ್ ಆಫ್ ಆರ್ಟ್ ದಿಶಾ ಪಟಾನಿ ಇತ್ತೀಚೆಗೆ ಬ್ಲೂ ಬಣ್ಣದ ಬಿಕಿನಿ ತೊಟ್ಟ ಫೋಟೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದು, ಇದೀಗ ಈ ಫೋಟೋ ಹೆಚ್ಚು ವೈರಲ್ ಆಗಿದೆ. ಅಪ್ಲೋಡ್ ಮಾಡಿದ ಒಂದೇ ದಿನಕ್ಕೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್‍ಗಳನ್ನು ಪಡೆದುಕೊಂಡಿದೆ.
https://www.instagram.com/p/BpBZZH6Fwc7/?hl=en&taken-by=dishapatani
ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‍ನಲ್ಲಿ ನಟಿ ದಿಶಾ ಪಟಾನಿ ಕ್ಯಾಟ್ ವಾಕ್ ಮಾಡಿದ್ದರು. ಅದರಲ್ಲಿ ಅವರು ಗುಲಾಬಿ ಬಣ್ಣದ ಲೇಹೆಂಗಾ ತೊಟ್ಟು ಸಿಂಪಲ್ ಮೇಕಪ್‍ನಲ್ಲಿ ವಧುವಿನ ಹಾಗೇ ಕಾಣಿಸಿಕೊಂಡಿದ್ದರು. ಈ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.
https://www.instagram.com/p/Bo6-QqLl9Y5/?hl=en&taken-by=dishapatani
ವೈಯಕ್ತಿಕ ವಿಚಾರದಲ್ಲಿ ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆ ಸುದ್ದಿಯಾಗಿದ್ದರು. ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದೆರಡು ತಿಂಗಳಿನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದವು.
ಸದ್ಯಕ್ಕೆ ದಿಶಾ ಪಟಾನಿ ಸಲ್ಮಾನ್‍ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಅದ್ದೂರಿ ಸಿನಿಮಾ`ಭಾರತ್’ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv