ರಾಮನಗರ: ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಮಂಜುನಾಥ್ (Dr Manjunath) ನೇತೃತ್ವದಲ್ಲಿ ದಿಶಾ ಕಮಿಟಿ ಸಭೆ (Disha Committee Meeting) ನಡೆಸಲಾಯಿತು.
ರಾಮನಗರದ (Ramanagara) ಜಿ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾಮಟ್ಟದ ಅಧಿಕಾರಿಗಳಿಂದ ಅಭಿವೃದ್ಧಿ ಕುರಿತು ಡಾ.ಮಂಜುನಾಥ್ ಮಾಹಿತಿ ಸಂಗ್ರಹ ಮಾಡಿದರು. ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ, ನಗರ ವ್ಯಾಪ್ತಿಯ ಕಸದ ಸಮಸ್ಯೆ, ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷತಾ ಅಭಿಯಾನ, ಸ್ಮಶಾನ ಅಭಿವೃದ್ಧಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚೆ ನಡೆಸಿದರು. ಇದನ್ನೂ ಓದಿ: 2027ರ ವೇಳೆಗೆ ಮೈಸೂರು-ಕುಶಾಲನಗರ 4 ಪಥದ ರಸ್ತೆ ಕಾಮಗಾರಿ ಪೂರ್ಣ – ಯದುವೀರ್
ಇನ್ನೂ ಸಭೆ ಆರಂಭಕ್ಕೂ ಮುನ್ನ ಅಧಿಕಾರಿಗಳಿಗೆ ಸಂಸದ ಡಾ.ಮಂಜುನಾಥ್ ಶಿಸ್ತಿನ ಪಾಠ ಮಾಡಿದರು. ಸಭೆ ನಡುವೆ ಯಾರೂ ಮೊಬೈಲ್ ಬಳಕೆ ಮಾಡಬೇಡಿ. ಏನಾದರೂ ತುರ್ತು ಕರೆಗಳಿದ್ದರೆ ಮಾತ್ರ ಬಳಕೆ ಮಾಡಿ. ಅದರ ಹೊರತಾಗಿ ಸಾಮಾಜಿಕ ಜಾಲತಾಣ ನೋಡುತ್ತಾ ಕೂರಬೇಡಿ. ಇದರಿಂದ ಸಭೆಗೆ ಅಗೌರವ ಹಾಗೂ ಸಭೆ ಉದ್ದೇಶಕ್ಕೆ ಧಕ್ಕೆ ಆಗುತ್ತೆ. ಅಲ್ಲದೇ ನಿಮ್ಮ ಕೆಲಸಗಳು ಜನರ ಬಳಿ ತಲುಪಿದಾಗ ಮಾತ್ರ ಜನ ನಿಮ್ಮನ್ನ ನೆನಪಿಸಿಕೊಳ್ಳುತ್ತಾರೆ. ಇಲ್ಲವಾದರೆ ನೀವು ಬೇಗ ಇಲ್ಲಿಂದ ಹೋಗಿ ಎಂದು ಶಾಪ ಹಾಕುತ್ತಾರೆ. ಅಧಿಕಾರಿಗಳು ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬಾಣಂತಿಯರಿಗೆ ಕೊಡಗು ಸೇಫ್