– ತೆಲಂಗಾಣ ಪೊಲೀಸರಿಂದ ಮಾನ್ವಿ, ಸಿಂಧನೂರಿನಲ್ಲಿ ತೀವ್ರ ವಿಚಾರಣೆ
ರಾಯಚೂರು: ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೂ ರಾಜ್ಯಕ್ಕೂ ಸಂಬಂಧವಿರುವ ಬಗ್ಗೆ ತೆಲಂಗಾಣ ಪೊಲೀಸರಿಗೆ ಅನುಮಾನ ಕಾಡುತ್ತಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
Advertisement
ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಬಹುದಾದ ಜಿಲ್ಲೆಯ ಮಾಹಿತಿಗಳನ್ನ ಪಡೆದಿರುವ ತೆಲಂಗಾಣ ಪೊಲೀಸರು ಈಗ ಮಾನ್ವಿ, ಸಿಂಧನೂರಿನಲ್ಲಿ ಕೆಲವರ ವಿಚಾರಣೆ ನಡೆಸಿದ್ದಾರೆ. ತೆಲಂಗಾಣ ಸೈಬರ್ ಕ್ರೈಂ ಡಿವೈಎಸ್ಪಿ ಶಾಮಬಾಬು ನೇತೃತ್ವದ ತಂಡ ಆರೋಪಿಗಳ ಮೊಬೈಲ್ ಕರೆಗಳ ಪಟ್ಟಿ ಹಿಡಿದು, ಮೊಬೈಲ್ ನಂಬರ್ ಆಧರಿಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Advertisement
Advertisement
ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗಳು ಹೈದ್ರಾಬಾದ್ ನಿಂದ ಮಾನ್ವಿ ತಾಲೂಕಿಗೆ ಸಾಮಗ್ರಿ ಸಾಗಿಸುವ ವೇಳೆ ಇಲ್ಲಿನ ಅಂಗಡಿ ಮಾಲೀಕರಿಗೆ, ಪೆಟ್ರೋಲ್ ಬಂಕ್ ಮಾಲೀಕರಿಗೆ, ಪಂಚರ್ ಅಂಗಡಿ ಮತ್ತು ಚಿಕನ್ ಅಂಗಡಿ ಯವರಿಗೆ ಮಾಡಿದ ಮೊಬೈಲ್ ಕರೆ ಮೇಲೆ ವಿಚಾರಣೆ ನಡೆಸಿದ್ದಾರೆ. ಕೊಪ್ಪಳ ಗಂಗಾವತಿಯಲ್ಲೂ ವಿಚಾರಣೆ ನಡೆಸಲಿರುವ ಪೊಲೀಸ್ ಅಧಿಕಾರಿಗಳು ಆರೋಪಿಗಳು ಬೇರೆ ಎಲ್ಲಿಯಾದರೂ ಇದೇ ರೀತಿಯ ಕೃತ್ಯಗಳನ್ನ ಎಸಗಿದ್ದಾರಾ ಅನ್ನೋ ತನಿಖೆಯಲ್ಲಿದ್ದಾರೆ.