ಬೆಂಗಳೂರು: ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಬಿ.ಜೆ. ಪುಟ್ಟಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಪ್ತ ಬಿ.ಜೆ. ಪುಟ್ಟಸ್ವಾಮಿ ಅಸಮಾಧಾನಗೊಂಡಿದ್ದು, ಯಡಿಯೂರಪ್ಪಗೆ ಬಹಿರಂಗವಾಗಿ ಪತ್ರ ಬರೆದು ರಾಜೀನಾಮೆ ನೀಡಿದ್ದಾರೆ.
Advertisement
ಪತ್ರದಲ್ಲಿ ಏನಿದೆ?
ತಮ್ಮಿಂದ ನನ್ನ ಸ್ವಂತ ಲಾಭಕ್ಕೆ ಯಾವುದೇ ಆಸೆ ಪಟ್ಟವನಲ್ಲ. ನಮ್ಮ ಜನಾಂಗಕ್ಕೆ ತಾವು ಮಾಡಿರುವ ಸಹಾಯಕ್ಕೆ ನಾನು ಮತ್ತು ನಮ್ಮ ಜನಾಂಗ ಚಿತ ಋಣಿಯಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲದಂತೆ ಸಾರ್ವಜನಿಕ ಉಪಯೋಗಕ್ಕೆ ಬಳಸಿದ್ದೇನೆ.
Advertisement
ನಾನು ನಂಬಿದ್ದು ಪಕ್ಷದಲ್ಲಿ ಒಬ್ಬ ದೇವರನ್ನು ಮಾತ್ರ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ಒಳ ಒಪ್ಪಂದವಿಲ್ಲದೇ ವಿರೋಧಿಗಳ ಹಲವು ಹಗರಣಗಳನ್ನು ಬಯಲಿಗೆ ಎಳೆದಿದ್ದೇನೆ. ಈಗ ನನ್ನ ರಕ್ಷಣೆಗೆ ಗತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ತಾವು ಮಾಡಿದ ಸಹಾಯಕ್ಕೆ ಋಣ ಮುಕ್ತನಾಗಿ ನಡೆದುಕೊಂಡಿದ್ದೇನೆ.
Advertisement
Advertisement
ನಾನು ಒಂದು ಜಾತಿಯ ಪ್ರತಿನಿಧಿಯೂ ಹೌದು. ಮುಖ್ಯವಾಗಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ನಾಯಕನಾಗಿದ್ದೇನೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ನನ್ನ ಉಪಸ್ಥಿತಿ ವಿಧಾನ ಪರಿಷತ್ತಿನ ಒಳಗೆ ಹಾಗೂ ಹೊರಗೆ ಮತ್ತು ಹಿಂದುಳಿದ ವರ್ಗಗಳ ಮತ್ತಷ್ಟು ಹೆಚ್ಚಿನ ಸಂಘಟನೆಗೆ ಮತ್ತು ಲೋಕಸಭಾ ಚುನಾವಣೆಗೆ ಅತ್ಯಂತ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತಿತ್ತು ಎಂಬ ದೃಢ ನಂಬಿಕೆ ನನಗಿತ್ತು.
ಆದರೆ, ಯಾವ ಮಾನದಂಡ ಅನುಸರಿಸಿ ವಿಧಾನ ಪರಿಷತ್ತಿನ ಸದಸ್ಯತ್ವದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡದಿರುವುದು ನನಗಾಗಲೀ ಅಧವಾ ಕರ್ನಾಟಕದ ಜನತೆಗಾಗಲೀ ಅರ್ಥವಾಗುತ್ತಿಲ್ಲ. ತಾವು ವಿಧಾನ ಪರಿಷತ್ತಿನ ಸದಸ್ಯತ್ವವನ್ನು ಮುಂದುವರೆಸುವುದರ ಜೊತೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಮರ್ಥಿಸಲು ವಿಪಕ್ಷ ನಾಯಕರನ್ನಾಗಿ ಮಾಡಲು ಇಚ್ಛೆಯನ್ನು ಸಹ ವ್ಯಕ್ತಪಡಿಸಿದ್ದೀರಿ. ಆ ಮಾತು ತಪ್ಪಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ.
ನನ್ನ ಅವಿರತ ಶ್ರಮ, ಬದ್ಧತೆ, ನಂಬಿಕೆ, ಪ್ರಾನವನ್ನು ಲೆಕ್ಕಿಸದೆ ಮಾಡಿದ ಸಮರ್ಥನೆ ಇವುಗಳೆಲ್ಲವೂ ಸೋತಿರುವುದಕ್ಕೆ ಅತೀವ ನೋವಾಗಿದೆ. ನನ್ನ ಜೀವನದ ಕೊನೆ ಹಂತದಲ್ಲಿ ಸಕ್ರಿಯ ರಾಜಕೀಯಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ.
ಪಕ್ಷದ ಸಂಘಟನೆಯಲ್ಲಿ ನನ್ನ ಜೊತೆ ಎಲ್ಲಾ ವಿಧದಲ್ಲೂ ಸಹಕರಿಸಿದ ನನ್ನ ಸಹಪಾಠಿಗಳಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ತಮ್ಮಗಳನ್ನು ರಾಜಕೀಯದಲ್ಲಿ ಸಾಧ್ಯವಾದಷ್ಟು ಗಟ್ಟಿ ಮಾಡುವ ಆಸೆ ನನ್ನದಾಗಿತ್ತು. ಅದು ಸಾಧ್ಯವಾಗದಿರುವುದಕ್ಕೆ ವಿಷಾಧಿಸುತ್ತೇನೆ.
ಮಾಧ್ಯಮಗಳಲ್ಲಿ ಮತ್ತು ಕನಾಟಕ ಜನತೆಯ ಮನಸ್ಸಿನಲ್ಲಿ ನನ್ನನ್ನು ತಮ್ಮ ಆಪ್ತನೆಂದು ಗುರುತಿಸಲಾಗಿದೆ. ಅದಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ನಡೆದುಕೊಂಡಿದ್ದೇನೆ ಎಂದು ನನ್ನ ಆತ್ಮಸಾಕ್ಷಿಯಾಗಿ ಈ ಮೂಲಕ ಕರ್ನಾಟಕ ಜನತೆಯ ಮುಂದೆ ಪ್ರಮಾಣಿಕರಿಸುತ್ತೇನೆ. ಅದಕ್ಕಾಗಿ ಈ ವಿವರಣೆ.
ಈ ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ಮತ್ತೊಮ್ಮೆ ಕೋರುತ್ತೇನೆ.